ಕೊನೆಗೂ ಲಾಕ್‌ಡೌನ್ ಗೊಂದಲಕ್ಕೆ ಸ್ಪಷ್ಟವಾಗಿ ತೆರೆ ಎಳೆದ ಸಚಿವ ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಮುಂದಿನ ದಿನ ರಾಜ್ಯದಲ್ಲಿ ಕೊವಿಡ್ 19 ನಿಯಂತ್ರಣಕ್ಕೆ ನಿಯಮ ಕಠಿಣವಾಗಲಿದೆ ಹೊರತು ಲಾಕ್ ಡೌನ್ 3.0 ಉದ್ದೇಶ ಸರಕಾರಕ್ಕಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ಹಾವಳಿಯಿಂದ ಈಗಾಗಲೇ ರಾಜ್ಯ ತತ್ತರಿಸಿದೆ. ಲಾಕ್ ಡೌನ್ ಕಾರಣ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಆದ್ದರಿಂದ ರಾಜ್ಯದಲ್ಲಿ ಮುಂದಿನ ದಿನಗಳು 3.0 ಲಾಕ್ ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

ಕರೋನ ಹಾವಳಿ ಹೆಚ್ಚು ಇರುವಂತಹ ಪ್ರದೇಶಗಳನ್ನು ಸೀಲ್‌ ಡೌನ್ ಮಾಡುವ ಮೂಲಕ ಕೊರೊನಾ ಸೋಂಕು ಹತೋಟಿಗೆ ತರಲಾಗುವುದು ಅಲ್ಲದೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಮೂಲಕ ಕೊರೋನ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊರೋನಾ ಸೋಂಕು ಹರಡುವಿಕೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಇದರ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಆದರೆ ಗ್ರಾಮೀಣ ಪ್ರದೇಶದಲ್ಲಿ ಈ ಸೋಂಕಿನ ಬಗ್ಗೆ ಅಷ್ಟೊಂದು ತಿಳುವಳಿಕೆ ಹಾಗೂ ಗಂಭೀರತೆಯನ್ನು ಮರೆತಿದ್ದಾರೆ ಲಾಕ್ ಡೌನ್ ಮಾಡಿದಲ್ಲಿ ಶೇಕಡ 80ರಷ್ಟು ಜನರಿಗೆ ಆರ್ಥಿಕವಾಗಿ ತೊಂದರೆಯಾಗಲಿದೆ ಆದ್ದರಿಂದ ಸರ್ಕಾರ ಲಾಕ್ಡೌನ್ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ತಿಳಿಸಿದರು.

# ಹಾಸನದಲ್ಲಿ ತಲೆಯೆತ್ತಲಿದೆ ನೂತನ ಜಿಲ್ಲಾ ಕಟ್ಟಡ…;
ಹಾಸನ ನಗರದ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೂತನವಾಗಿ ಹಾಸನ ಜಿಲ್ಲೆ ಇತಿಹಾಸ ಹಾಗೂ ಸಾಂಸ್ಕೃತಿ ಬಿಂಬಿಸುವ ನೂತನ ಜಿಲ್ಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಅಶೋಕ್ ತಿಳಿಸಿದರು .

ಈಗಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಉಳಿಸಿಕೊಂಡು ಇದರ‌ ಹಿಂಭಾಗದಲ್ಲಿರುವ ಹಳೆ ನ್ಯಾಯಾಲಯದ ಹಾಗೂ ಜಿಲ್ಲಾ ಖಜಾನೆ ಕಟ್ಟಡಗಳನ್ನು ತೆರವುಗೊಳಿಸಿ ಅಲ್ಲಿ ನೂತನ ಜಿಲ್ಲಾ ಕಟ್ಟಡವನ್ನು ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಅಲ್ಲದೆ ತಾಲೂಕು ಕಚೇರಿಯೂ ಸಹ ಶಿಥಿಲಗೊಂಡಿದ್ದ ಈ ಕಚೇರಿಯನ್ನು ಸಹ ಹೊಸದಾಗಿ ನಿರ್ಮಾಣ ಮಾಡುವಂತೆ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳುವುದಾಗಿ ಕಂದಾಯ ಸಚಿವರು ತಿಳಿಸಿದರು.

# ಪಿಂಚಣಿ ಪಾವತಿ ಸರಳಿಕರಣ…;
ರಾಜ್ಯ ಸರ್ಕಾರ ಪ್ರತಿ ತಿಂಗಳು 7000 ಕೋಟಿ ಪಿಂಚಣಿಯನ್ನು ವೃದ್ಧಾಪ್ಯ- ವಿಧವಾ -ಅಂಗವಿಕಲ ಫಲಾನುಭವಿಗಳಿಗೆ ಪಾವತಿ ಮಾಡುತ್ತಿದೆ ಅಂಚೆ ಕಚೇರಿ ಮೂಲಕ ಸಮಯಕ್ಕೆ ಸರಿಯಾಗಿ ಪಿಂಚಣಿ ಪಾವತಿಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು; ವೇತನ ಪಾವತಿಯು ಎರಡು ಮೂರು ತಿಂಗಳು ತಡವಾಗಿ ಫಲಾನುಭವಿಗಳ ಕೈಸೇರುತ್ತಿದೆ .
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಗಳ ಮೂಲಕ ಪಿಂಚಣಿ ಹಣ ಪಾವತಿಯಾಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

# ಹೋಂಸ್ಟೇ ಹಾಗೂ ರೆಸಾರ್ಟ್ ಮುಚ್ಚಲು ವಾರದ ಗಡುವು;
ಮಲೆನಾಡು ಪ್ರದೇಶವಾದ ಸಕಲೇಶಪುರ ತಾಲೂಕಿನಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ ಗಳು ತೆರೆದಿರುವ ಕಾರಣ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ . ಇದರಿಂದ ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆ ಹಾಗೂ ಭೀತಿ ಆವರಿಸಿರುವ ಕಾರಣ ಒಂದು ವಾರದ ನಂತರ ರೆಸಾರ್ಟ್ ಹಾಗೂ ಹೋಂಸ್ಟೇಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲು ಆದೇಶ ನೀಡುವಂತೆ ಜಿಲ್ಲಾಧಿಕಾರಿಗೆ ಸಚಿವರು ಇದೇ ವೇಳೆ ಸೂಚನೆ ನೀಡಿದರು.

# ರಸ್ತೆ ಬಂದ್ ಮಾಡಲು ಸ್ಥಳೀಯ ಆಡಳಿತದ ಅನುಮತಿ‌ ಕಡ್ಡಾಯ;
ಇತ್ತೀಚಿಗೆ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಕೊರೋನಾ ಹತೋಟಿಗೆ ಅಲ್ಲಿನ ಶಾಸಕರು ಹಾಗೂ ಸಂಸದರು ಕ್ರಮ ವಹಿಸುತ್ತಿದ್ದಾರೆ ಆದರೆ ಇದರಿಂದ ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಸ್ಥಳೀಯ ಆಡಳಿತದ ಸಹಕಾರ ಹಾಗೂ ಅನುಮತಿ ಯೊಂದಿಗೆ ತೀರ್ಮಾನಗಳನ್ನು ಕೈಗೊಳ್ಳುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು.

ಈ ವೇಳೆ ಶಾಸಕ ಪ್ರೀತಂ ಜೆ ಗೌಡ, ಎಚ್. ಕೆ. ಕುಮಾರಸ್ವಾಮಿ, ಲಿಂಗೇಶ್ , ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ,ಸೇರಿದಂತೆ ಇತರರು ಹಾಜರಿದ್ದರು.

Facebook Comments

Sri Raghav

Admin