ಲಾಕ್ ಡೌನ್ ಮುಂದುವರಿಕೆಯಿಂದ ಮತ್ತಷ್ಟು ಅನುಕೂಲ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹೀಗಾಗಿ ಲಾಕ್ ಡೌನ್ ಮುಂದುವರಿಸಿದರೆ ಮತ್ತಷ್ಟು ಅನುಕೂಲ ಆಗುತ್ತದ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಲಾಕ್ ಡೌನ್ ಇನ್ನು ಕೆಲವು ದಿನಗಳ ಮಟ್ಟಿಗೆ ಮುಂದುವರೆಯಲಿದೆ ಎಂಬ ಸುಳಿವನ್ನು ಅವರು ಪರೋಕ್ಷವಾಗಿ ನೀಡಿದ್ದಾರೆ.

ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಆಗಬೇಕು.

ಮುಖ್ಯಮಂತ್ರಿ ಅವರು ಸ ಈಗಿರುವ ಲಾಕ್ ಡೌನ್ ಮುಗಿಯುವ ಮುನ್ನ 3-4 ದಿನಗಳಲ್ಲಿ ಸಭೆ ಮಾಡ್ತಾರೆ. ಸಭೆಯಲ್ಲಿ ಈ ಬಗ್ಗೆ ಸಲಹೆ ಕೊಡ್ತೀವಿ. ಸಿಎಂ ಅಂತಿಮವಾಗಿ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಮಾಡುತ್ತಾರೆ ಎಂದರು.

ನಾನು ಬೆಂಗಳೂರು ನಾಗರೀಕನಾಗಿ ಲಾಕ್ ಡೌನ್ ಮುಂದುವರಿಕೆ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ನಾವು ಲಾಕ್ ಡೌನ್ ಮಾಡಬೇಕು ಎಂದು ಸಿಎಂಗೆ ಸಲಹೆ ಮಾಡುತ್ತೇವೆ ಎಂದರು.
ಮಹಾರಾಷ್ಟ್ರ, ದೆಹಲಿ ಪ್ರಕರಣ ನಮ್ಮ ಮುಂದಿದೆ. ಅಲ್ಲಿ ಮೊದಲ ಅಲೆ ಬಂತು. ಅವರು ಲಾಕ್ ಡೌನ್ ವಿಸ್ತರಣೆ ಮಾಡಿದರು.ಅದನ್ನು ‌ನಾವು ಅನುಸರಿಸುತ್ತೇವೆ ಎಂದರು.

ಕಳೆದ 10 ದಿನಗಳಲ್ಲಿ ಈ ಆಸ್ಪತ್ರೆ ಸಿದ್ಧತೆ ಮಾಡಿದ್ದೇವೆ. ಆಕ್ಸಿಜನ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಇಲ್ಲಿ ಇದೆ. ಡಬಲ್ ಎಂಜಿನ್ ಸ್ಟಿಸ್ಟಮ್ ಇಲ್ಲಿ ವ್ಯವಸ್ಥೆ ಇಲ್ಲಿ ಮಾಡಿದ್ದೇವೆ. ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಸ್ಥಳಿಯವಾಗಿ ಅನುಕೂಲ ಆಗಲು ಈ ಆಸ್ಪತ್ರೆ ಪ್ರಾರಂಭ ಮಾಡಲಾಗಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ.

ಸ್ಪೆಷಲಿಸ್ಟ್ ವೈದ್ಯರು ಇಲ್ಲಿ ಇದ್ದಾರೆ ಎಂದು ಸಚಿವರು ತಿಳಿಸಿದರು.
ಮಕ್ಕಳಿಗಾಗಿ ವಿಶೇಷ ಕೇಂದ್ರ ಪ್ರಾರಂಭ ಮಾಡ್ತಿದ್ದೇವೆ. 50 ಮಕ್ಕಳ ಬೆಡ್ ಪ್ರಾರಂಭ ಮಾಡಲಾಗ್ತಿದೆ. ಪೋಷಕರಿಗೂ ಉಳಿಯಲು ಅವಕಾಶ ನೀಡಲಾಗುತ್ತೆ. ಮಕ್ಕಳಿಗೆ ಆಗೋ ಸಮಸ್ಯೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗ್ತಿದೆ ಎಂದು ವಿವರಿಸಿದರು.

Facebook Comments

Sri Raghav

Admin