ಆರ್. ಅಶ್ವಿನ್‍ಗೆ 12 ಲಕ್ಷ ಜುಲ್ಮಾನೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.21- ನಿಗದಿತ ಸಮಯಕ್ಕಿಂತ 7 ನಿಮಿಷಗಳ ಕಾಲ ತಡವಾಗಿ ಪಂದ್ಯ ಮುಗಿಸಿದ್ದರಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್‍ನ ನಾಯಕ ರವಿಚಂದ್ರನ್ ಅಶ್ವಿನ್‍ಗೆ ಐಪಿಎಲ್ ಅಧಿನಿಮಯದ ಪ್ರಕಾರ 12 ಲಕ್ಷ ರೂ.ಗಳ ಜುಲ್ಮಾನೆಯನ್ನು ವಿಧಿಸಲಾಗಿದೆ.

ನಿನ್ನೆ ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಕಿಂಗ್ಸ್‍ನ ಬೌಲರುಗಳು ನಿಧಾನಗತಿಯ ಬೌಲಿಂಗ್ ಮಾಡಿದ್ದರಿಂದ ಅಶ್ವಿನ್‍ಗೆ ದಂಡವನ್ನು ಹೇರಲಾಗಿದೆ.

ಕಿಂಗ್ಸ್ ನಿನ್ನೆಯ ಪಂದ್ಯವನ್ನು 5 ವಿಕೆಟ್‍ಗಳಿಂದ ಸೋಲು ಕಂಡಿತು.ಈ ಬಾರಿಯ ಐಪಿಎಲ್‍ನಲ್ಲಿ ನಿಧಾನಗತಿಯ ಬೌಲಿಂಗ್‍ನಿಂದಾಗಿ ತಂಡದ ನಾಯಕರಿಗೆ ಜುಲ್ಮಾನೆ ವಿಧಿಸಿರುವುದು ಇದೇ ಮೊದಲಲ್ಲ,

ಇದಕ್ಕೂ ಮುನ್ನ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧವೇ ನಿಧಾನಗತಿಯ ಬೌಲಿಂಗ್ ಮಾಡಿದ್ದರಿಂದ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ಜುಲ್ಮಾನೆ ವಿಧಿಸಲಾಗಿತ್ತು.

ಮುಂಬೈ ಇಂಡಿಯನ್ಸ್‍ನ ನಾಯಕ ರೋಹಿತ್ ಶರ್ಮಾ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಅಜೆಂಕ್ಯಾ ರಹಾನೆಗೂ ಕೂಡ ಸ್ಲೋ ಬೌಲಿಂಗ್ ಮಾಡಿದ ಪರಿಣಾಮವಾಗಿ 12 ಲಕ್ಷ ರೂ.ಗಳ ದಂಡವನ್ನು ದಂಡವನ್ನು ಹೇರಲಾಗಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin