ಸಿಂಧಗಿ ತಾಲ್ಲೂಕಿನ ಅಲಮೇಲದಲ್ಲಿ ಹೊಸ ತೋಟಗಾರಿಕಾ ಕಾಲೇಜು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.5-ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಅಲಮೇಲದಲ್ಲಿ ಹೊಸ ತೋಟಗಾರಿಕಾ ಕಾಲೇಜುನ್ನು ಆರಂಭಿಸಲು ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಆರ್.ಶಂಕರ್ ಭರವಸೆ ನೀಡಿದರು.
ಆಡಳಿತ ಪಕ್ಷದ ಸದಸ್ಯ ಅರುಣ್ ಶಹಾಪುರ ಅವರ ಪರವಾಗಿ, ಹನುಮಂತ ನಿರಾಣಿ ಅವರು ಪ್ರಶ್ನೆ ಕೇಳಿ, ಹಿಂದಿನ ತೋಟಗಾರಿಕಾ ಸಚಿವರು ವಿಜಯಪುರ ಜಿಲ್ಲೆಗೆ ತೊಟಗಾರಿಕೆ ಕಾಲೇಜು ಮಂಜೂರು ಮಾಡಿದರು.

ಆದರೆ ಸಚಿವರು ಈಗ ನೀಡಿರುವ ಉತ್ತರದಲ್ಲಿ ಕಾಲೇಜು ಸ್ಥಾಪನೆ ಮುಂದೂಡಲಾಗಿದೆ ಎಂದಿದ್ದಾರೆ. ಪಕ್ಕದ ಬಾಗಲಕೋಟೆ ಯಲ್ಲೇ ತೋಟಗಾರಿಕೆ ವಿವಿ ಚೆನ್ನಾಗಿ ನಡೆಯುತ್ತಿದೆ. ವಿಜಯಪುರದಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚಾಗಿವೆ. ಕಾಲೇಜು ಪ್ರಾರಂಭ ಮಾಡಿ ಬಜೆಟ್‍ನಲ್ಲಿ ಅನುದಾನ ಘೋಷಣೆ ಮಾಡಿ ಕಾಲೇಜು ಆರಂಭಿಸುವ ದಿನಾಂಕ ಹೇಳಿ ಎಂದು ಒತ್ತಡ ಹೇರಿದರು.
ಸಿಎಂ ಜೊತೆ ಚರ್ಚೆ ಮಾಡಿ ಅರ್ಥಿಕ ಪರಿಸ್ಥಿತಿ ಆಧರಿಸಿ ಕಾಲೇಜು ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಆಡಳಿತ ಪಕ್ಷದ ಮತ್ತೊಬ್ಬ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣ್ಯ ಅವರು ಪ್ರಶ್ನೆ ಕೇಳಿ, ಕೊಡುಗಿನಲ್ಲಿ ಕಾಫಿ ಬೆಳೆ 10 ವರ್ಷದಿಂದ ಯಥಾಸ್ಥಿತಿಯಲ್ಲೇ ಇದೆ. ಉಪಬೆಳೆಯನ್ನಾಗಿ ಕಿತ್ತಳೆಯನ್ನು ಬೆಳೆದರೆ ಲಾಭವಾಗುತ್ತದೆ. ಹುಲಿ, ಆನೆ ಕಾಟದಲ್ಲಿ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಕಿತ್ತಳೆ ಬೆಳೆಗೆ ಸರ್ಕಾರ ಪ್ರೋತ್ಸಾಹಿಸಬೇಕು ಎಂದರು ಇದಕ್ಕೆ ಉತ್ತರಿಸಿದ ಸಚಿವ ಶಂಕರ್, ಕಿತ್ತಳೆ ಬೆಳೆಗಾರರಿಗೆ ಭೂಮಿ ಹದ ಮಾಡಿಕೊಳ್ಳಲು , ಇತರೆ ಕೆಲಸಗಳಿಗಾಗಿ ಅನುದಾನ ನೀಡುತ್ತಿದ್ದೇವೆ ಎಂದಾಗ, ಅದು ಸಾಲುತ್ತಿಲ್ಲ. ಮತ್ತಷ್ಟು ಹೆಚ್ಚಿಸಲು ಸುನಿಲ್ ಸುಬ್ರಹ್ಮಣ್ಯ ಒತ್ತಡ ಹೇರಿದರು.

ಇದು ಕೇಂದ್ರ ಸರ್ಕಾರದ ಎನ್‍ಎಚ್ ಆರ್ ಎಂ ಯೋಜನೆ ಹಾಗಾಗಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಾಗ, ಸದಸ್ಯರು ಮಾತನಾಡಿ ನೀವು ಹೊಸದಾಗಿ ಸಚಿವರಾಗಿದ್ದೀರಿ. ಕೇಂದ್ರಕ್ಕೆ ಪತ್ರ ಬರೆಯಿರಿ. ಒಂದಿಷ್ಟು ಸಾಧನೆಯಾಗುವಂತಹ ಕೆಲಸ ಮಾಡಿ ಎಂದು ಸಲಹೆ ನೀಡಿದರು.

Facebook Comments

Sri Raghav

Admin