Thursday, March 28, 2024
Homeಕ್ರೀಡಾ ಸುದ್ದಿರಾಚಿನ್ ಯುವರಾಜ್‍ಸಿಂಗ್‍ರನ್ನು ನೆನಪಿಸುತ್ತಾರೆ : ಅನಿಲ್‍ಕುಂಬ್ಳೆ

ರಾಚಿನ್ ಯುವರಾಜ್‍ಸಿಂಗ್‍ರನ್ನು ನೆನಪಿಸುತ್ತಾರೆ : ಅನಿಲ್‍ಕುಂಬ್ಳೆ

ಬೆಂಗಳೂರು, ಅ.6 – ನ್ಯೂಜಿಲೆಂಡ್ ಯುವ ಅಲ್‍ರೌಂಡರ್ ರಾಚಿನ್ ರವೀಂದ್ರ ಅವರು ಚಿರ ಯುವಕರಾಗಿದ್ದ ಯುವರಾಜ್‍ಸಿಂಗ್ ಅವರ ಆಟವನ್ನು ಮರುಕಳಿಸಿದ್ದಾರೆ ಎಂದು ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ಹೆಡ್ ಕೋಚ್ ಅನಿಲ್ ಕುಂಬ್ಳೆ ಅವರು ಗುಣಗಾಣ ಮಾಡಿದ್ದಾರೆ.

2023ನೇ ಸಾಲಿನ ಐಸಿಸಿ ಪುರುಷರ ಒಡಿಐ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ನ್ಯೂಜಿಲೆಂಡ್‍ನ ಯುವ ಆಲ್‍ರೌಂಡರ್ 96 ಎಸೆತಗಳಲ್ಲೇ ಅಜೇಯ 123 ರನ್ ಗಳನ್ನು ಸಿಡಿಸಿದ್ದರು.

ಇಂಗ್ಲೆಂಡ್ ನೀಡಿದ 283 ರನ್ ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ಆರಂಭಿಕ ಆಟಗಾರ ವಿಲ್ ಯಂಗ್ ರನ್ನ ಬಹುಬೇಗ ಕಳೆದುಕೊಂಡಿತು. ಆದರೆ ಆರಂಭಿಕ ಆಟಗಾರ ಡೆವೊನ್ ಕಾನ್ವೆ (152ರನ್) ಹಾಗೂ ರಚಿನ್ ರವೀಂದ್ರ (12 ರನ್) ಅವರು 2ನೇ ವಿಕೆಟ್‍ಗೆ ಅಜೇಯ 273 ದಾಖಲೆಯ ಜೊತೆಯಾಟ ಆಡಿ 36.2 ಓವರ್‍ಗಳಲ್ಲೇ 283 ರನ್ ಗಳಿಸಿ ಗೆಲುವಿನ ಕೇಕೆ ಹಾಕಿದರು.

ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳು ಮತ್ತು ಗುಂಡಾಗಳ ತಾಣವಾಗಿದೆ : ಬಿಜೆಪಿ ವಾಗ್ದಾಳಿ

ರಾಚಿನ್‍ಗೆ ಜಂಬೂ ಪ್ರಶಂಸೆ:
ಪಾಕಿಸ್ತಾನ ವಿರುದ್ಧದ ಪೂರ್ವ ಅಭ್ಯಾಸ ಪಂದ್ಯದಲ್ಲೇ ರಾಚಿನ್ ರವೀಂದ್ರ ಅವರ ಬ್ಯಾಟಿಂಗ್ ಸಾಮಥ್ರ್ಯವನ್ನು ಕಂಡಿದ್ದೇವೆ. ಅವನು ಆರಂಭಿಕನಾಗಿ ಬ್ಯಾಟಿಂಗ್ ಆರಂಭಿಸಿದ್ದು ತುಂಬಾ ವಿಶೇಷವಾಗಿತ್ತು. ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ರಾಚಿನ್ ಅವರು ಬ್ಯಾಟಿಂಗ್ ನೋಡುತ್ತಿದ್ದರೆ, ನಮ್ಮ ಕಣ್ಣಮುಂದೆ ಚಿರಯುವಕ ಯುವರಾಜ್ ಸಿಂಗ್ ಅವರ ಆಟವು ತೇಲಿಬರುತ್ತದೆ’ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ರಾಚಿನ್ ರವೀಂದ್ರ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ತಮ್ಮ ಆಲ್‍ರೌಂಡರ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠರಾದರು.

RELATED ARTICLES

Latest News