ಬೀದಿ ನಾಯಿಗಳ ಹಾವಳಿ ತಪ್ಪಿಸಲು ಬಿಬಿಎಂಪಿಯಿಂದ ‘ರೇಬಿಸ್ ಹೆಲ್ಪ್ ಲೈನ್’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.15- ಬೀದಿ ನಾಯಿಗಳ ಹಾವಳಿಗೆ ಮುಕ್ತಿ ಹಾಡಲು ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸುವ ಉದ್ದೇಶದಿಂದ ಬಿಬಿಎಂಪಿ ರೇಬಿಸ್ ಹೆಲ್ಪ್‍ಲೈನ್ ಬಿಡುಗಡೆ ಮಾಡಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಚರಿಸಲಾದ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈ ವಿಷಯ ತಿಳಿಸಿದರು.

ಬೀದಿ ನಾಯಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಪಾಲಿಕೆಯಿಂದ ಹೆಲ್ಪ್‍ಲೈನ್ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದರು.

ನಾಯಿ ಕಚ್ಚಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಮೂರು ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ನಾಯಿ ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಲಿದೆ.

ಕಚ್ಚಿದ ನಾಯಿಯನ್ನು ಹಿಡಿದು ಆ ನಾಯಿಗೆ ರೇಬಿಸ್ ಟೆಸ್ಟ್ ಮಾಡಲಾಗುವುದು. ಇದರ ಜತೆಗೆ ಆ ಭಾಗದಲ್ಲಿರುವ ಎಲ್ಲ ನಾಯಿಗಳಿಗೂ ರೇಬಿಸ್ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದರು.

ನಗರದಲ್ಲಿರುವ ಎಲ್ಲ ನಾಯಿಗಳಿಗೂ ರೇಬಿಸ್ ಚುಚ್ಚುಮದ್ದು ಹಾಕಲು ಹೆಲ್ಪ್‍ಲೈನ್ ಸಹಕಾರಿಯಾಗಲಿದೆ ಎಂದು ಹೇಳಿದರು.ಸದ್ಯ ನಗರದಲ್ಲಿ ನಾಯಿ ಕಚ್ಚಿದ ಸ್ಥಳಕ್ಕೆ ದೌಡಾಯಿಸಿ ಚುಚ್ಚುಮದ್ದು ನೀಡಲು ಮೂರು ತಂಡಗಳನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಎಂಟೂ ವಲಯಗಳಿಗೂ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

Facebook Comments

Sri Raghav

Admin