ರಾಧಿಕಾ ಪಂಡಿತ್‍ಗೆ ಗಂಡು ಮಗು ಜನನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 30- ಚಂದನವನದ ಲವ್ಲಿ ಕಪಲ್ಸ್ ಎಂದೇ ಬಿಂಬಿಸಿಕೊಂಡಿರುವ ರಾಂಕಿಂಗ್‍ಸ್ಟಾರ್ ಯಶ್ ಹಾಗೂ ರಾಧಿಕಾಪಂಡಿತ್‍ರ ಮನೆಗೆ ಹೊಸ ಸದಸ್ಯನ ಎಂಟ್ರಿ ಆಗಿದೆ. ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತವನ್ನು ಆಚರಿಸಿಕೊಂಡು ಫೋಟೋಗಳನ್ನು ಅಂತರ್ಜಾಲದಲ್ಲಿ ಹಾಕಿ ಖುಷಿ ಹಂಚಿಕೊಂಡಿದ್ದ ರಾಧಿಕಾ ಇಂದು ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಯಶ್ ಹಾಗೂ ರಾಧಿಕಾ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆಗಳು ನಡೆಸಿದ್ದು ಇನ್ನೆರಡು ದಿನದಲ್ಲಿ ರಾಧಿಕಾ ಡಿಸ್ಕರ್ಚ್ ಆಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಯಶ್ ದಂಪತಿಗೆ ಈಗಾಗಲೇ ಆಯ್ರಾ ಎಂಬ ಹೆಣ್ಣು ಮಗುವಿದ್ದು ಈಗ ಗಂಡು ಮಗುವಿನ ಎಂಟ್ರಿ ಆಗಿದ್ದು ಈ ಮಗುವಿಗೆ ಏನು ಹೆಸರಿಡುತ್ತಾರೋ ಎಂಬ ಕುತೂಹಲವು ಅಭಿಮಾನಿಗಳಲ್ಲಿ ಮನೆ ಮಾಡಿದೆ.

Facebook Comments