ನಡಾಲ್‍ಗೆ 4ನೇ ಬಾರಿಗೆ ಯುಎಸ್ ಓಪನ್ ಕಿರೀಟ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.9- ಸ್ಪೇನ್‍ನ ಆಕ್ರಮಣಕಾರಿ ಆಟಗಾರ ರಫಾಲ್ ನಡಾಲ್ ನಾಲ್ಕನೆ ಬಾರಿ ಪ್ರತಿಷ್ಠಿತ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ನಡಾಲ್‍ಗೆ ಇದು 19ನೆ ಗ್ರಾಂಡ್ ಸ್ಲಾಮ್ ಆಗಿದ್ದು, 27ನೇ ಗ್ರ್ಯಾನ್ ಸ್ಲಾಂ ಫೈನಲ್ ಪಂದ್ಯವಾಗಿತ್ತು. ನಿನ್ನೆಯಷ್ಟೇ ಕೆನಡಾದ 19ರ ತರುಣಾ ಬಿಯಾಂಕಾ 23 ಬಾರಿ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗಳಿಸಿದ್ದ ಬಲಿಷ್ಠ ಅಮೆರಿಕದ ಸೆರೇನಾ ವಿಲಿಯಮ್ಸ್‍ರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದರು.

ಇದರೊಂದಿಗೆ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಯುಎಸ್ ಓಪನ್ ಕಿರೀಟ ಅನ್ಯ ದೇಶದ ಆಟಗಾರರ ಪಾಲಾದಂತಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಫೈನಲ್‍ನಲ್ಲಿ ಸ್ಪೈನ್‍ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ಜಯ ಸಾಧಿಸಿ ನಾಲ್ಕನೆ ಬಾರಿಗೆ ಯುಎಸ್ ಓಪನ್ ಪ್ರಶಸ್ತಿ ಎತ್ತಿ ಹಿಡಿದರು.

ನ್ಯೂಯಾರ್ಕ್‍ನ ಆಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ರಷ್ಯಾದ ಮೆಡ್ವೆಡೆವ್ ಅವರನ್ನು 7-5, 6-3, 5-7, 4-6, 6-4 ನೇರ ಸೆಟ್‍ಗಳ ಅಂತರದಲ್ಲಿ ಮಣಿಸಿದರು.  ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ನಡಾಲ್‍ಗೆ ಮೆಡ್ವೆಡೆವ್ ತೀವ್ರ ಪ್ರತಿರೋಧ ಒಡ್ಡಿದ್ದರು. ಐದು ಸೆಟ್‍ಗಳವರೆಗೂ ನಡೆದ ದೀರ್ಘ ಹಣಾಹಣಿಯಲ್ಲಿ ನಡಾಲ್ ಅಂತಿಮ ಸೆಟ್ ಅನ್ನು 6-4 ಅಂತರದಲ್ಲಿ ತಮ್ಮದಾಗಿಸಿಕೊಳ್ಳುವದರೊಂದಿಗೆ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಚುಂಬಿಸಿದರು.

ಇನ್ನು 20 ಪ್ರಶಸ್ತಿಗಳೊಂದಿಗೆ ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ಆಟಗಾರರ ಪಟ್ಟಿಯಲ್ಲಿ ರೋಜರ್ ಫೆಡರರ್ ಮೊದಲ ಸ್ಥಾನದಲ್ಲಿದ್ದು, ನಡಾಲ್ 2ನೇ ಸ್ಥಾನದಲ್ಲಿದ್ದಾರೆ. ಯುಎಸ್ ಓಪನ್ ಗೆದ್ದರೆ ನಡಾಲ, ಫೆಡರರ್ ಸಮೀಪಕ್ಕೆ ಬಂದಿದ್ದಾರೆ. ನಿನ್ನೆ ನಡೆದ ಮಹಿಳೆಯರ ರೋಚಕ ಫೈನಲ್‍ನಲ್ಲಿ 23 ಗ್ರಾನ್ ಸ್ಲಾಮ್ ವಿನ್ನರ್ ಅಮೆರಿಕದ ಸೆರೆನಾ ವಿಲಿಯಮ್ಸಗೆ ಕೆನಡಾದ 19 ವರ್ಷದ ಉದಯೋನ್ಮುಖ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಆಘಾತ ನೀಡಿದ್ದು. ಚೊಚ್ಚಲ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು.

Facebook Comments