ನಿಮ್ಮ ಅಭಿಮಾನಕ್ಕೆ ಧನ್ಯವಾದ : ರಾಘವೇಂದ್ರ ರಾಜ್ ಕುಮಾರ್ ಟ್ವೀಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.6-   ಅಪ್ಪುನ ನೋಡಲು ಅಭಿಮಾನಿಗಳ ಸಾಗರವೇ ಬರುತ್ತಿದೆ. ನೆನ್ನೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಮಂದಿಯು ಬಿಸಿಲು ಹಾಗೂ ಮಳೆ ಎಂದು ಏನೂ ಲೆಕ್ಕಿಸದೆ ಅವನನ್ನು ನೋಡಲು ಬಂದ್ದಿದ್ದಾರೆ. ನಿಮ್ಮ ಅಭಿಮಾನಕ್ಕೆ ಧನ್ಯವಾದ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನು ಆಗಲಿ 9 ದಿನ ಕಳೆದರು ಅಭಿಮಾನಿಗಳಲ್ಲಿ ಇನ್ನು ಆ ನೋವನ್ನು ಮರಿಯಲು ಸಾಧ್ಯವಾಗಿಲ್ಲ, ಕಳೆದ ನಾಲಕ್ಕು ದಿನಗಳಿಂದ ಅಪ್ಪು ಸಮಾಧಿ ವೀಕ್ಷಣೆಗೆ ಲಕ್ಷಾಂತರ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಬರುತ್ತಿದ್ದರೆ.

ನಿನ್ನೆ ದೀಪಾವಳಿ ಹಬ್ಬವನ್ನು ಆಚರಿಸದೇ ಕುಟುಂಬ ಸಮೇತ ಮಳೆಯನ್ನೂ ಲೆಕ್ಕಿಸದೆ ಅಪ್ಪು ಸಮಾಧಿಗೆ 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ. ಈ ಕುರಿತು ಪುನೀತ್ ಸೋದರ ರಾಘವೇಂದ್ರ ರಾಜ್ ಕುಮಾರ ತಮ್ಮ ಟ್ವೀಟ್ ಮೂಲಕ ಅಪ್ಪು ಅಭಿಮಾನಿಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ.

Facebook Comments