ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜ. 12- ಡ್ರಗ್ಸ್ ನಂಟಿನ ಸಂಬಂಧ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿರುವುದರಿಂದ ತುಪ್ಪದ ಬೆಡಗಿ ಜೈಲಿನಲ್ಲೇ ಸಂಕ್ರಾಂತಿ ಅಚರಿಸಲಿದ್ದಾರೆ.

ಜಾಮೀನು ಕೋರಿ ನಟಿ ರಾಗಿಣಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆಯನ್ನು ಜನವರಿ 19 ರಂದು ನಡೆಸುವುದಾಗಿ ಹೇಳಿರು ವುದರಿಂದ ಒಂದು ವಾರದ ಕಾಲ ರಾಗಿಣಿ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

ಈ ಹಿಂದೆ ರಾಗಿಣಿ ಡ್ರಗ್ಸ್ ನಂಟಿನ ಸಂಬಂಧ ವಾಗಿಯೇ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರಾದರೂ ಜಾಮೀನು ನೀಡಲು ನಿರಾಕರಿಸಿದ್ದರಿಂದ ರಾಗಿಣಿ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸೆಪ್ಟೆಂಬರ್ 4ರಿಂದ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.

Facebook Comments