ಬ್ರೇಕಿಂಗ್ : ರಾಗಿಣಿ-ಸಂಜನಾ ಜಾಮೀನು ಅರ್ಜಿ 24ಕ್ಕೆ ಮುಂದೂಡಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ.21 : ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗೆ ಇನ್ನು ಮೂರು ದಿನ ಜೈಲೇ ಗತಿಯಾಗಿದೆ. ಇಂದು ಎನ್ ಡಿಸ್ಪಿಎಸ್ ನ್ಯಾಯಾಲಯದಲ್ಲಿ ಬಂದಂತಹ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಸೆ.24 ಕ್ಕೆ ಮುಂದೂಡಿದ್ದಾರೆ. ಇದರಿಂದಾಗಿ ಈ ಇಬ್ಬರೂ ಇನ್ನೂ 3 ದಿನ ಜೈಲಲ್ಲೇ ಕಾಲಕಳೆಯುವುದು ಅನಿವಾರ್ಯವಾಗಿದೆ.

ರಾಗಿಣಿ ಹಾಗೂ ಸಂಜನಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಇಂದು ವಿಶೇಷ ಸರ್ಕಾರಿ ವಕೀಲರು ನೀಡಿದ ಮಾಹಿತಿ ಕುತೂಹಲ ಕೆರಳಿಸಿತ್ತು .

ಬೆಂಗಳೂರು ಸೆಪ್ಟೆಂಬರ್ 21.ಡ್ರಗ್ಸ್ ಜಾಲದಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿ ಅವರು ಚಿತ್ರಗಳಲ್ಲಿ ತಾರೆಯಾಗಿ ಮಿಂಚಿದ್ದಾರೆ ಆದರೆ ಅವರು ಕೆಲವು ಸಮಾಜಘಾತಕ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ವಿಶೇಷ ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ಎಂದು ವಾದಿಸಿದ್ದಾರೆ.

ರಾಗಿಣಿ ಅವರು ಎರಡು ಮುಖ ಹೊಂದಿದ್ದಾರೆ ಸಿನಿಮಾದಲ್ಲಿ ಅವರು ಹೀರೋಯಿನ್ ಹೊರಗಡೆ ಅವರು ಡ್ರಗ್ಸ್ ಕಾಲದಲ್ಲಿದ್ದಾರೆ ಬೊಂಬಾಯಿ ಗೋವಾ ಸೇರಿದಂತೆ ಹಲವು ಕಡೆಗಳಿಂದ ಡ್ರಗ್ಸ್ ತಂದಿದ್ದಾರೆ ಶ್ರೀಮಂತರು ಹಾಗೂ ಸಮಾಜ ಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿ ಅವರಿಗೆ ಡ್ರಗ್ ಸರಬರಾಜು ಮಾಡುವಲ್ಲಿ ಇವರು ನಿರತರಾಗಿದ್ದರು ಎಂದು ಮಾಹಿತಿಯನ್ನು ತಿಳಿಸಲಾಗಿದೆ.

ಬಂಧಿತ ಆರೋಪಿಯಲ್ಲಿ ಏಳನೇ ಆರೋಪಿಯಾಗಿರುವ ನೊಂದಿಗೆ ನಿಕಟ ಸಂಪರ್ಕ ಹೊಂದಿ ಕಳೆದ ಐದು ವರ್ಷಗಳಿಂದ ಪಾರ್ಟಿಗಳನ್ನು ನಡೆಸುತ್ತಿದ್ದರು ಹಾಗೂ ಅಲ್ಲಿಗೆ ಬರುವಂತಹ ಶ್ರೀಮಂತರು ಹಾಗೂ ಹಲವರಿಗೆ ಟ್ರಕ್ ಸಪ್ಲೈ ಮಾಡುತ್ತಿದ್ದರು ಎಂದು ಮತ್ತು ಇದಲ್ಲದೆ ಈಗ ಬಂಧಿತರಾಗಿರುವ ಟ್ರೇಡ್ ಟ್ರಕ್ ಪೆಡ್ಲರ್ ಆರೋಪಿಗಳೊಂದಿಗೆ ಇವರು ನಿರಂತರ ಸಂಪರ್ಕದಲ್ಲಿದ್ದರು ಎಂದು ಕೂಡ ದೂರಲಾಗಿದೆ .

ರಾಗಿಣಿಯರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದಕ್ಕೆ ನಮಗೆ ಸಾಕಷ್ಟು ಸಾಕ್ಷಗಳಿವೆ ಸುಮಾರು 20 ವರ್ಷ ಶಿಕ್ಷೆಗೊಳಗಾಗುವ ಅಪರಾಧವನ್ನು ಅವರು ಎಸಗಿದ್ದಾರೆ ಸಿಸಿಬಿ ಪರ ವಾದ ಮಂಡಿಸಿದ ಸರ್ಕಾರೀ ವಿಶೇಷ ವಕೀಲರು ಹಲವಾರು ವಿಷಯಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

Facebook Comments

Sri Raghav

Admin