ಜೈಲಲ್ಲಿ ಕಾದಂಬರಿ ಓದುವಲ್ಲಿ ‘ಮಾದಕ’ ನಟಿಮಣಿಯರು ಬ್ಯುಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರುಗಳು ಕಾದಂಬರಿ ಓದುವಲ್ಲಿ ತೊಡಗಿದ್ದಾರೆ. ಜೈಲು ಆಡಳಿತ ಕೊಡುವ ಉಪಹಾರ ಮತ್ತು ಊಟವನ್ನು ಸೇವಿಸಿದ್ದಾರೆ.  ಕೆಲವು ಹೊತ್ತು ನಿದ್ದೆ ಮಾಡಿದರೆ ಮತ್ತೆ ಕೆಲಸಮಯದಲ್ಲಿ ಪುಸ್ತಕ ಓದುತ್ತಾ ಕಾಲಕಳೆಯುತ್ತಿದ್ದಾರೆ.

ಕ್ವಾರಂಟೈನ್ ಕಾರಾಗೃಹದ ಬೇರೆ ಬೇರೆ ಕೊಠಡಿಯಲ್ಲಿ ಇವರನ್ನು ಇರಿಸಲಾಗಿದೆ. ಒಂದು ವೇಳೆ ಆರೋಗ್ಯದಲ್ಲಿ ಸಮಸ್ಯೆಯಾದರೆ ಜೈಲಿನ ವೈದ್ಯರೇ ತಪಾಸಣೆ ನಡೆಸಿ ಔಷದೋಪಚಾರ ಮಾಡುತ್ತಾರೆ.

ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರು ನಟಿಯರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

Facebook Comments