ಕ್ವಾರಂಟೇನ್ ಕಾರಾಗೃಹದಲ್ಲಿ ರಾ’ಗಿಣಿ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ನಟಿ ರಾಗಿಣಿ ಅವರು ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೇನ್ ಕಾರಾಗೃಹದಲ್ಲಿದ್ದಾರೆ. ರಾಗಿಣಿ ಅವರು ಸೆಲೆಬ್ರಿಟಿಯಾಗಿರುವುದರಿಂದ ಅವರಿರುವ ಕಾರಾಗೃಹಕ್ಕೆ ಹೆಚ್ಚಿನ ಭದ್ರತೆ ಮಾಡಲಾಗಿದೆ.

ಕಾರಾಗೃಹದ ಪದ್ದತಿ ಪ್ರಕಾರ ಈ ಜೈಲಿಗೆ ಬರುವವರು 10 ದಿನ ಕ್ವಾರಂಟೇನ್ ಕಾರಾಗೃಹದಲ್ಲಿರಬೇಕು. ಒಂದು ವೇಳೆ 10 ದಿನವೂ ಇಲ್ಲೇ ಇದ್ದರೆ ನಂತರದ ದಿನಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದರೆ ಬೇರೆ ಕೊಠಡಿಯ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ರಾಗಿಣಿ ಅವರು ರಾತ್ರಿ ಊಟ ಮಾಡಿದ್ದಾರೆ. ಬೆಳಗ್ಗೆ ಉಪಹಾರ ಸೇವಿಸಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತಾರೆಂದು ಜೈಲಿನ ಮೂಲಗಳು ತಿಳಿಸಿವೆ.

ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಮಾಹಿತಿ ಮೇರೆಗೆ ನಟಿ ರಾಗಿಣಿ ಅವರ ಮನೆ ಮೇಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮನೆಯನ್ನೆಲ್ಲಾ ಪರಿಶೀಲಿಸಿ ಅವರನ್ನು ಬಂಸಿ ಹಲವು ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

Facebook Comments

Sri Raghav

Admin