ಇನ್ನು 2 ದಿನ ಪರಪ್ಪನ ಅಗ್ರಹಾರ ಪಂಜರದಲ್ಲೇ ರಾ’ಗಿಣಿ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.23- ಜಾಮಿನಿನ ಮೇಲೆ ಹೊರಬಂದಿದ್ದ ನಟಿ ರಾಗಿಣಿ ದ್ವಿವೇದಿ, ಷರತ್ತು ಪೂರೈಸದ ಹಿನ್ನೆಲೆಯಲ್ಲಿ ಇನ್ನು ಎರಡು ದಿನಗಳ ಕಾಲ ಜೈಲಿನಲ್ಲೇ ಮುಂದುವರೆಬೇಕಿದೆ. ರಾಗಿಣಿಗೆ ಎರಡು ಲಕ್ಷ ರೂ. ಬಾಂಡ್‍ನೊಂದಿಗೆ ಜಾಮೀನು ನೀಡಲಾಗಿತ್ತು. ಆದರೆ ಇದನ್ನು ಸಕಾಲಕ್ಕೆ ಪೂರೈಸದ ಹಿನ್ನೆಲೆಯಲ್ಲಿ ನಾಳೆ ಭಾನುವಾರ ಇರುವ ಕಾರಣ ಇನ್ನು ಎರಡು ದಿನ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.

ಇದಲ್ಲದೆ ಕೊರೊನಾ ಹಿನ್ನೆಲೆಯಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಜಾಮೀನುದಾರರು ಮತ್ತು ಶ್ಯೂರಿಟಿ ಹಣ ಕಟ್ಟಲು ಸಾಧ್ಯವಿಲ್ಲ. ಅಂತರ್ಜಾಲದ ಮೂಲಕವೇ ವಿಚಾರಣೆ ವೇಳೆ ಇದನ್ನು ತೋರಿಸಿ, ಅದು ಪರಿಶೀಲನೆಗೊಳಪಟ್ಟ ನಂತರ ನ್ಯಾಯಾಲಯ ಬಿಡುಗಡೆ ದಾಖಲೆಯನ್ನು ನೀಡಲಿದೆ. ಸೋಮವಾರವೂ ಇದು ಸಾಧ್ಯವಾಗದಿದ್ದರೆ ಜ.27ರಂದು ರಾಗಿಣಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

Facebook Comments

Sri Raghav

Admin