ಬಿಜೆಪಿ ಸೇರಿ ‘ರಾಜಕೀಯ’ ಮಾಡಲು ಮುಂದಾಗಿದ್ದ ‘ಮಾದಕ’ ನಟಿ ರಾಗಿಣಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15-ಡ್ರಗ್ಸ್ ಜಾಲ ದಂಧೆಯಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಕೆಲ ತಿಂಗಳ ಹಿಂದೆ ಬಿಜೆಪಿ ಸೇರುವ ವಿಫಲ ಯತ್ನ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಜಕೀಯದಲ್ಲಿ ಮಹತ್ವಾಕಾಂಕ್ಷಿಯಾಗಿದ್ದ ರಾಗಿಣಿ ಬಿಜೆಪಿ ಸೇರಿ ಮುಂದಿನ ಚುನಾವಣೆಗೆ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದ್ದರು. ಇದಕ್ಕಾಗಿಯೇ ಕೆಲ ದಿನಗಳ ಹಿಂದೆ ಹೈದರಾಬಾದ್‍ಗೆ ತೆರಳಿದ್ದ ಅವರು ಕರ್ನಾಟಕ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಅವರನ್ನು ಭೇಟಿ ಮಾಡಿ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.

ತಕ್ಷಣವೇ ನನಗೆ ಪಕ್ಷದಲ್ಲಿ ಯಾವುದೇ ರೀತಿಯ ಸ್ಥಾನಮಾನ ಬೇಡ. ಒಬ್ಬ ಸಾಮಾನ್ಯ ಕಾರ್ಯಕರ್ತಳಾಗಿ ಸೇವೆ ಸಲ್ಲಿಸುತ್ತೇನೆ. ಪಕ್ಷ ಸೇರಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದರು. ರಾಗಿಣಿಯ ಹಿನ್ನೆಲೆ ತಿಳಿಯದ ಮುರುಳೀಧರ್ ರಾವ್ ಬೆಂಗಳೂರಿನಲ್ಲಿ ಪಕ್ಷದ ಮುಖಂಡರಾದ ಆರ್.ಅಶೋಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ಸೂಚಿಸಿದ್ದರು.

ಅದರಂತೆ ಅಶೋಕ್ ಅವರನ್ನು ಭೇಟಿಯಾಗಲು ರಾಗಿಣಿ ಹಲವು ಬಾರಿ ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಏಕೆಂದರೆ ಆ ವೇಳೆಗಾಗಲೇ ಚಿತ್ರರಂಗವಲ್ಲದೆ ಬೇರೆ ಬೇರೆ ಕಡೆಯೂ ಆಕೆಯ ಚಟುವಟಿಕೆಗಳ ಬಗ್ಗೆ ಗೌಪ್ಯವಾಗಿ ಮಾಹಿತಿಯನ್ನು ಕಲೆ ಹಾಕಲಾಗಿತ್ತು.

ಎಷ್ಟೇ ಪ್ರಯತ್ನಿಸಿದರೂ ಅಶೋಕ್ ರಾಗಿಣಿ ಅವರಿಗೆ ಭೇಟಿ ಮಾಡಲು ಅವಕಾಶ ಕೊಡಲಿಲ್ಲ. ನೀವು ಪಕ್ಷ ಸೇರ್ಪಡೆಯಾಗುವುದಾದರೆ ರಾಜ್ಯ ಘಟಕದ ನಾಯಕರೊಂದಿಗೆ ಚರ್ಚಿಸಬೇಕು. ನಾನು ಏಕಪಕ್ಷೀಯವಾಗಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಶೋಕ್ ನುಣುಚಿಕೊಂಡಿದ್ದರು.

ಯಾವಾಗ ಅಶೋಕ ಅವರಿಂದ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಸಿಗಲಿಲ್ಲವೋ ರಾಗಿಣಿ ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮೂಲಕವೂ ಪಕ್ಷ ಸೇರಲು ಪ್ರಯತ್ನಿಸಿದ್ದರು. ರಾಗಿಣಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪ್ರಾರಂಭದಲ್ಲಿ ಲಿಂಬಾವಳಿ ಒಲವು ತೋರಿದರಾದರೂ ಆಪ್ತರು ನೀಡಿದ ಗೌಪ್ಯ ಮಾಹಿತಿ ಕಾರಣ ಅವರು ಕೂಡ ದೂರ ಸರಿದರು.

ಅಂತಿಮವಾಗಿ ಎಲ್ಲವೂ ವಿಫಲವಾದ ಮೇಲೆ ರಾಗಿಣಿ ಬಿಜೆಪಿ ಸೇರ್ಪಡೆಯಾಗುವ ಯತ್ನವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಒಂದು ವೇಳೆ ಅಂದು ಪಕ್ಷಕ್ಕೆ ಬರಮಾಡಿಕೊಂಡಿದ್ದರೆ ಬಿಜೆಪಿಗೆ ಇಂದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮುಜುಗರ ಉಂಟಾಗುತಿತ್ತು.

Facebook Comments

Sri Raghav

Admin