ಸಿಸಿಬಿ ನೋಟಿಸ್‌ಗೆ ರಾಗಿಣಿ ಫಸ್ಟ್​ ರಿಯಾಕ್ಷನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.3- ಸಿಸಿಬಿಯವರು ನನಗೆ ನೋಟಿಸ್ ಕೊಟ್ಟಿದ್ದಾರೆ. ಸಮಯದ ಅಭಾವದ ಕಾರಣ ನಾನು ಕಚೇರಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸೋಮವಾರ ಬೆಳಗ್ಗೆ ಬಂದು ಹೇಳಿಕೆ ನೀಡುತ್ತೇನೆ ಎಂದು ನಟಿ ರಾಗಿಣಿ ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೀಡಿರುವ ನೋಟಿಸ್ ಸಂಬಂಧ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ನೋಟಿಸ್ ಕೊಟ್ಟಿರುವ ಬಗ್ಗೆ ಖಚಿತ ಪಡಿಸಿದ್ದಾರೆ.

ಕಡಿಮೆ ಅವಧಿಯಲ್ಲಿ ಅಂದರೆ ನಿನ್ನೆ ನೋಟಿಸ್ ಸಿಕ್ಕಿದೆ. ನಾನು ಸಿಸಿಬಿಗೆ ಇಂದು ಬರಲು ಆಗುವುದಿಲ್ಲ. ನನ್ನ ವಕೀಲರು ಸಿಸಿಬಿ ಕಚೇರಿಗೆ ಬಂದಿದ್ದಾರೆ. ಸೋಮವಾರ ಬೆಳಗ್ಗೆ ಕಚೇರಿಗೆ ಹೋಗಿ ನಾನು ಹೇಳಿಕೆ ನೀಡುತ್ತೇನೆ ಎಂದು ರಾಗಿಣಿ ಟ್ವಿಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

Facebook Comments