ವಯನಾಡಿನಲ್ಲಿ ರಾಹುಲ್‍, ವಾರಣಾಸಿಯಲ್ಲಿ ಮೋದಿ ಜಯಭೇರಿ

ಈ ಸುದ್ದಿಯನ್ನು ಶೇರ್ ಮಾಡಿ

ವಯನಾಡು, ಮೇ 23-ಕೇರಳದ ನಯನ ಮನೋಹರ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದೊಂದಿಗೆ ವಯನಾಡಿನಲ್ಲೂ ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದ ರಾಹುಲ್ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ಕೇರಳ ಕಾಂಗ್ರೆಸ್ ಕೋರಿಕೆ ಮೇರೆಗೆ ವಯನಾಡಿನಲ್ಲಿ ಸ್ಪರ್ಧಿಸಿದ್ದ ರಾಹುಲ್ ದೇವರ ನಾಡಿನಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ರಾಹುಲ್‍ಗೆ ವಯನಾಡಿನ ಮುಸ್ಲಿಂ ಪಕ್ಷಗಳು ಮತ್ತು ಇತರ ಸಂಘಟನೆಗಳು ಭಾರೀ ಬೆಂಬಲ ಸೂಚಿಸಿದ್ದವು.  ರೋಡ್‍ಶೋ ಮತ್ತು ಚುನಾವಣಾ ಪ್ರಚಾರ ವೇಳೆಯೂ ಎಐಸಿಸಿ ಅಧ್ಯಕ್ಷರಿಗೆ ಭರ್ಜರಿ ಸ್ಪಂದನೆ ಲಭಿಸಿತ್ತು.  [ LOKSABHA ELECTIONS 2019 RESULT – Live Updates]

#ವಾರಣಾಸಿಯಲ್ಲಿ ಮೋದಿಗೆ ಭಾರೀ ಗೆಲುವು :  ವಾರಣಾಸಿ, ಮೇ 23-ಉತ್ತರ ಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್‍ನ ಅಜಯ್‍ರಾಯ್ ಅವರನ್ನು 1.25ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮೋದಿ ಪರಾಭವಗೊಳಿಸಿದ್ದಾರೆ.

ಈ ಗೆಲುವಿನೊಂದಿಗೆ ಮೋದಿ ಎರಡನೇ ಸಲ ವಾರಣಾಸಿಯಿಂದ ಚುನಾಯಿತರಾಗಿದ್ದು, ಪ್ರಧಾನಿಯಾಗಿ ದ್ವಿತೀಯ ಬಾರಿಗೆ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ನಿರೀಕ್ಷೆಯಂತೆ ಮೋದಿ ವಾರಣಾಸಿಯಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. [ LOKSABHA ELECTIONS 2019 RESULT – Live Updates]

ಏಳನೇ ಮತ್ತು ಕೊನೆಯ ಹಂತದ ಲೋಕಸಭಾ ಚುನಾವಣೆ ವೇಳೆ ಮೋದಿ ವಾರಣಾಸಿಯಲ್ಲಿ ನಡೆಸಿದ ರೋಡ್‍ಶೋಗೆ ಅಸಂಖ್ಯಾತ ಬೆಂಬಲಿಗರು ಮತ್ತು ಕಾರ್ಯಕರ್ತರಿಂದ ಭಾರೀ ಬೆಂಬಲ ದೊರೆತಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin