ಭಾರತ-ನ್ಯೂಜಿಲ್ಯಾಂಡ್ ಸರಣಿಗೆ ರಾಹುಲ್ ದ್ರಾವಿಡ್ ಕೋಚ್..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ. 14- ಚುಟುಕು ವಿಶ್ವಕಪ್‍ನ ನಂತರ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಇತರ ಸಿಬ್ಬಂದಿಗಳ ಸೇವಾವ ಮುಗಿಯುವ ಕಾರಣ ಹೊಸ ತರಬೇತುದಾರರನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತಿಸಿದೆ. ಈ ನಡುವೆ ಚುಟುಕು ವಿಶ್ವಕಪ್ ಮುಗಿದ ಮೂರು ದಿನಗಳ ಅಂತರದಲ್ಲಿ ಭಾರತ ತಂಡವು 2 ಟೆಸ್ಟ್ ಹಾಗೂ 3 ಚುಟುಕು ಪಂದ್ಯಗಳನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದ್ದು ಕನ್ನಡಿಗ ರಾಹುಲ್ ದ್ರಾವಿಡ್ ಅವರು ಮತ್ತೊಮ್ಮೆ ಭಾರತದ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದು ಬಹುತೇಕ ಖಚಿತವಾಗಿದೆ.

ಈ ಹಿಂದೆ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವು ಇಂಗ್ಲೆಂಡ್‍ನಲ್ಲಿ ಟೆಸ್ಟ್ ಸರಣಿ ಆಡುವ ಸಂದರ್ಭದಲ್ಲಿ ರವಿಶಾಸ್ತ್ರಿ ಅನುಪಸ್ಥಿತಿಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ಸಾರಥ್ಯದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ತಂಡದ ಮುಖ್ಯ ಕೋಚ್ ಆಗಿದ್ದರು.
ಭಾರತ ತಂಡವು ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಗೆದ್ದು, ಚುಟುಕು ಸರಣಿಯಲ್ಲಿ ಸೋಲು ಕಂಡಿತ್ತು.

ಈಗ ಚುಟುಕು ವಿಶ್ವಕಪ್‍ನ ನಂತರ ರವಿಶಾಸ್ತ್ರಿ ಸೇರಿದಂತೆ ಎಲ್ಲಾ ತರಬೇತುದಾರರ ಅವ ಮುಗಿಯುವು ದರಿಂದ ನ್ಯೂಜಿಲ್ಯಾಂಡ್ ಸರಣಿಗೆ ರಾಹುಲ್ ದ್ರಾವಿಡ್ ಮುಖ್ಯಕೋಚ್ ಆಗುವುದು ಖಚಿತ.

ರವಿಶಾಸ್ತ್ರಿಯಿಂದ ತೆರವಾಗುವ ಮುಖ್ಯ ಕೋಚ್ ಹುದ್ದೆಗೆ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಕರೆತರಬೇಕೆಂಬ ಹೆಬ್ಬಯಕೆ ಬಿಸಿಸಿಐಗೆ ಇದೆ ಆದರೂ ರಾಹುಲ್ ದ್ರಾವಿಡ್ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಸ್ಥಾನದತ್ತ ಕಣ್ಣು ಇಟ್ಟಿರುವುದರಿಂದ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯನ್ನು ನಿರಾಕರಿಸಲಿದ್ದಾರೆ.

ಭಾರತ- ನ್ಯೂಜಿಲ್ಯಾಂಡ್ ಸರಣಿ ವೇಳಾಪಟ್ಟಿ
ನವೆಂಬರ್ 17- ಮೊದಲ ಟ್ವೆಂಟಿ-20 ಪಂದ್ಯ- ಸಾವಲ್ ಮನ್‍ಸಿಂಗ್ ಕ್ರೀಡಾಂಗಣ, ಜೈಪುರ
ನವೆಂಬರ್ 19- 2ನೆ 20-20 ಪಂದ್ಯ- ಜೆಎಸ್‍ಸಿಎ ಕ್ರೀಡಾಂಗಣ, ರಾಂಚಿ
ನವೆಂಬರ್ 21- ಮೂರನೆ ಟ್ವೆಂಟಿ-20 ಪಂದ್ಯ- ಈಡನ್ ಗಾರ್ಡನ್
ನವೆಂಬರ್ 25- 29- ಮೊದಲ ಟೆಸ್ಟ್- ಗ್ರೀನ್ ಪಾರ್ಕ್, ಕಾನ್ಪುರ
ಡಿಸೆಂಬರ್ 3- 07- 2ನೆ ಟೆಸ್ಟ್- ವಾಂಖೆಡೆ ಕ್ರೀಡಾಂಗಣ, ಮುಂಬೈ

Facebook Comments