`ಮಹಾಗೋಡೆ’ಗೆ 48ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತ ತಂಡದ ಗೋಡೆ ಎಂದೇ ಖ್ಯಾತರಾಗಿದ್ದ ಕನ್ನಡಿಗ ರಾಹುಲ್‍ದ್ರಾವಿಡ್ಗೆ ಇಂದು 48ರ ಸಂಭ್ರಮ. ದ್ರಾವಿಡ್‍ರ ಹುಟ್ಟುಹಬ್ಬದ ಅಂಗವಾಗಿ ಬಿಸಿಸಿಐ ಸೇರಿದಂತೆ ಹಲವರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಕೂಡ ಮಹಾಗೋಡೆಗೆ ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಕ್ರಿಕೆಟ್ ಜೀವನದಿಂದ ನಿವೃತ್ತಿ ಪಡೆದರೂ ಕೂಡ ಭಾರತ ತಂಡಕ್ಕೆ ಸದೃಢ ಆಟಗಾರರನ್ನು ಕೊಡುವಲ್ಲಿ ಇವರ ಪಾತ್ರ ಅಮೋಘವಾಗಿದ್ದು ಅವರ ಬಗ್ಗೆ ಕೆಲವು ವಿಶಿಷ್ಟ ಸಂಗತಿಗಳು ಈ ಕೆಳಕಂಡಂತಿದೆ.

* ದ್ರಾವಿಡ್‍ರ ಪೂರ್ಣ ಹೆಸರು ರಾಹುಲ್ ಶಾರದ್ ಶರ್ಮಾ.
* ಇಂಧೋರ್ನಲ್ಲಿ ರಾಹುಲ್ ಜನಿಸಿದರೂ ಕೂಡ ಅವರು ಕ್ರಿಕೆಟಿಗರಾಗಿ ಕಾಣಿಕೆ ನೀಡಿದ್ದು ಕರ್ನಾಟಕ ತಂಡಕ್ಕೆ.
* ರಾಹುಲ್ ದ್ರಾವಿಡ್‍ರ ತಂದೆ ಕಿಸಾನ್ ಜಾಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ದ್ರಾವಿಡ್‍ರನ್ನು ಪ್ರೀತಿಯಿಂದ ಜ್ಯಾಮಿ ಎಂದು ಕರೆಯುತ್ತಾರೆ, ಕಿಸಾನ್ ಜಾಹೀರಾತಿನಲ್ಲೂ ರಾಹುಲ್ ಕಾಣಿಸಿಕೊಂಡಿದ್ದರು.
* ರಾಹುಲ್ ದ್ರಾವಿಡ್‍ಗೆ ದಿ ವಾಲ್, ಮಿಸ್ಟರ್ ಡಿಫೆಂಡರ್, ಜ್ಯಾಮಿ ಎಂಬ ನಾನಾ ನಾಮಾವಳಿಗಳಿವೆ.
* ಆರಂಭಿಕ ದಿನಗಳಲ್ಲಿ ಹಾಕಿ ಆಟಗಾರನಾಗಿದ್ದ ರಾಹುಲ್ ದ್ರಾವಿಡ್ ನಂತರ ತಮ್ಮ 12ನೇ ವಯಸ್ಸಿನಲ್ಲಿ ಕ್ರಿಕೆಟ್ ಜೀವನದತ್ತ ವಾಲಿದರೂ ಅಂಡರ್ 15, ಅಂಡರ್ 17, ಅಂಡರ್ 19 ತಂಡಗಳಲ್ಲಿ ಆಡಿದ್ದಾರೆ.
* ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಕ್ರೀಡಾಸ್ಫೂರ್ತಿ ಮೆರೆದವರು, ಆ ಪಂದ್ಯದಲ್ಲಿ 95 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾಗಲೇ ಔಟಾದ ದ್ರಾವಿಡ್À ಅಂಪೈರ್ ತೀರ್ಪಿಗೂ ಕಾಯದೆ ಮೈದಾನ ತೊರೆದಿದ್ದರು.
* 1999 ವಿಶ್ವಕಪ್‍ನಲ್ಲಿ 461 ರನ್ ಗಳಿಸಿ ಅತಿ ಹೆಚ್ಚು ಗಳಿಸಿದ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದರು.
* 2000ರ ವಿಸ್ಟನ್ ಕ್ರಿಕೆಟಿಗರಾದರು.
* ದ್ರಾವಿಡ್ ಟೆಸ್ಟ್‍ನಲ್ಲಿ 11 ಬಾರಿ ಪಂದ್ಯಪುರುಷೋತ್ತಮರಾಗಿದ್ದರು. ವಿಶಿಷ್ಟವೆಂದರೆ ವಿದೇಶಗಳಲ್ಲಿ 8 ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಟೆಸ್ಟ್‍ನಲ್ಲಿ ಎರಡನೇ ವಿಕೆಟ್‍ನಲ್ಲಿ 300 ರನ್‍ಗಳ ಜೊತೆಯಾಟವಾಡಿದ ಕೀರ್ತಿ ಹೊಂದಿದ್ದಾರೆ. ಹೈದ್ರಾಬಾದ್‍ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್‍ರೊಂದಿಗೆ 331 ರನ್ ಜೊತೆಯಾಟ ನೀಡಿದ್ದರೆ, ಸೌರವ್‍ಗಂಗೂಲಿ ಜೊತೆಗೂಡಿ ಟೌಟಾನ್‍ನಲ್ಲಿ ನಡೆದ ಪಂದ್ಯದಲ್ಲಿ 318 ರನ್‍ಗಳ ಕಾಣಿಕೆ ನೀಡಿದ್ದರು.
* ದ್ರಾವಿಡ್ ಟೆಸ್ಟ್‍ನಲ್ಲಿ 1 ಹಾಗೂ ಏಕದಿನದಲ್ಲಿ 4 ವಿಕೆಟ್‍ಗಳನ್ನು ಕೆಡವಿದ್ದಾರೆ.
* ನಾಲ್ಕು ಇನ್ನಿಂಗ್ಸ್‍ನಲ್ಲೂ ಶತಕ ಗಳಿಸಿದ ಏಕಮೇವ ಭಾರತೀಯ ಬ್ಯಾಟ್ಸ್‍ಮನ್.
* ರಾಹುಲ್ ದ್ರಾವಿಡ್ ಅವರು ಟೆಸ್ಟ್‍ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಪಾದಾರ್ಪಣೆ ಮಾಡಿದರೆ, ಏಕದಿನ ಹಾಗೂ ಟ್ವೆಂಟಿ-20 ಪಂದ್ಯವನ್ನು ಇಂಗ್ಲೆಂಡ್ ವಿರುದ್ಧವೇ ಆಡಿ ನಿವೃತ್ತಿ ಘೋಷಿಸಿದ್ದಾರೆ.
* 2004-05ರಲ್ಲಿ ದೇಶದ ಅತ್ಯಾಕರ್ಷಕ ಕ್ರೀಡಾಪಟು ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಆ ವರ್ಷ ಅವರಿಗೆ ಮತ್ತೊಬ್ಬ ಕ್ರಿಕೆಟಿಗ ಯುವರಾಜ್‍ಸಿಂಗ್ ಹಾಗೂ ಸಾನಿಯಾಮಿರ್ಜಾ ಸ್ಪರ್ಧೆ ಒಡ್ಡಿದ್ದರು.
* ರಾಹುಲ್‍ದ್ರಾವಿಡ್ ಟೆಸ್ಟ್‍ನಲ್ಲಿ 30 ಸಾವಿರ ಎಸೆತಗಳನ್ನು ಎದುರಿಸಿದ್ದು ಈ ದಾಖಲೆಯನ್ನು ಇದುವರೆಗೂ ಯಾರು ಮಾಡಿಲ್ಲ.
* ಟೆಸ್ಟ್ ಪಂದ್ಯವಾಡಿದ ಎಲ್ಲಾ ತಂಡಗಳ ವಿರುದ್ಧ ಶತಕ ಗಳಿಸಿದ ಏಕಮೇವ ಬ್ಯಾಟ್ಸ್‍ಮನ್ ಎಂಬ ಕೀರ್ತಿ ರಾಹುಲ್ ಹೆಸರಿನಲ್ಲಿದೆ.
* ರಾಹುಲ್ ದ್ರಾವಿಡ್‍ರ ಪತ್ನಿಯ ಜನ್ಮದಿನಾಂಕ 19 ಆಗಿರುವುದರಿಂದ ಅವರು ತಮ್ಮ ಜೆರ್ಸಿಯಾಗಿ 19 ಅನ್ನು ಆಯ್ಕೆ ಮಾಡಿಕೊಂಡಿದ್ದರು.
* ಕ್ರಿಕೆಟ್ ಜೀವನದಲ್ಲಿ ತೋರಿದ ಅದ್ಭುತ ಸಾಧನೆಗಾಗಿ ಅವರಿಗೆ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ.

Facebook Comments