ಕೇದಾರನಾಥ ಭೇಟಿ ಮೋದಿಯ ಹೈಡ್ರಾಮಾ ಎಂದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 20- ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಒಂದು ಡ್ರಾಮಾ ಎಂದು ಟೀಕಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಈ ಬಗ್ಗೆ ಚುನಾವಣಾ ಆಯೋಗ ಏಕೆ ಕ್ರಮ ಕೈಗೊಂಡಿಲ್ಲ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮತಯಂತ್ರಗಳಿಂದ ಹಿಡಿದು ಚುನಾವಣಾ ವೇಳಾಪಟ್ಟಿಯವರೆಗೂ ಪ್ರಧಾನಿ ಮೋದಿಯವರ ಹಸ್ತಕ್ಷೇಪವಿದೆ.

ಅಲ್ಲದೇ ನಮೋ ಟಿವಿ ಮತ್ತವರ ಮೋದಿ ಸೇನೆ ಕೇದಾರನಾಥಕ್ಕೆ ತೆರಳಿರುವುದೂ ಒಂದು ನಾಟಕವೇ ಆಗಿದೆ. ಆದರೂ ಚುನಾವಣಾ ಆಯೋಗ ಮೋದಿ ಮತ್ತು ಅವರ ಬಣಕ್ಕೆ ಶರಣಾಗಿದ್ದು, ಆಯೋಗ ಅವರಿಗೆ ಹೆದರುತ್ತಿದೆ ಎಂದು ಟೀಕಿಸಿದ್ದಾರೆ.

ಚಿದು ಟೀಕೆ: ಮೋದಿ ಅವರ ಯಾತ್ರೆ, ಧಾರ್ಮಿಕ ಸಂಕೇತವನ್ನು ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುವ ತಂತ್ರವಾಗಿದೆ. ಚುನಾವಣಾ ಆಯೋಗವೂ ನಿದ್ರಿಸುತ್ತಿದೆ.

ತನ್ನ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಅಧಿಕಾರವನ್ನು ಮೋದಿಗೆ ಒಪ್ಪಿಸಿಬಿಟ್ಟಿದೆ. ಇದು ನಾಚಿಕೆಗೇಡು ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಷ್ಟೇ ಅಲ್ಲದೆ, ಟಿಡಿಪಿ ಹಾಗೂ ತೃಣಮೂಲ ಕಾಂಗ್ರೆಸ್ ಸಹ ಆಯೋಗದ ವಿರುದ್ಧ ಕಿಡಿಕಾರಿದ್ದು, ಮೋದಿ ಕೇದಾರನಾಥಕ್ಕೆ ಭೇಟಿ ನೀಡಿ, ಮಾಧ್ಯಮಗಳ ಮೂಲಕ ಭಾರಿ ಪ್ರಚಾರ ಪಡೆದಿದ್ದರೂ ಆಯೋಗ ಮಾತ್ರ ಅವರ ಬಗ್ಗೆ ಮೃದು ಧೋರಣೆ ತೋರುತ್ತಿದೆ ಎಂದು ಆರೋಪಿಸಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ