ಭಾರತದ ಹಿತಾಸಕ್ತಿಗೆ ಮೋದಿ ಮಹಾದ್ರೋಹ : ರಾಹುಲ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.23- ಭಾರತ-ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿರುವುದು ನಿಜವೇ ಆದರೆ ಇದು ರಾಷ್ಟ್ರದ ಹಿತಾಸಕ್ತಿಗೆ ಬಗೆದ ಮಹಾ ದ್ರೋಹವಾಗಲಿದೆ ಎಂದು ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ರುವ ರಾಹುಲ್, ಎಸ್.ಜೈಶಂಕರ್ ಅತ್ಯಂತ ದುರ್ಬಲ ವಿದೇಶಾಂಗ ಸಚಿವರಾಗಿದ್ದಾರೆ ಎಂದು ಟೀಕಿಸಿದರು.
ಟ್ರಂಪ್ ಹೇಳಿಕೆ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ.

ಆದರೂ ಪ್ರಧಾನಿ ಮೋದಿಯ ವರು ಏಕೆ ಮೌನವಾಗಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದರು. ಟ್ರಂಪ್-ಮೋದಿ ನಡುವೆ ನಡೆದಿರುವ ಮಾತುಕತೆಯ ಎಲ್ಲಾ ವಿವರಗಳು ಬಹಿರಂಗ ಗೊಳ್ಳಬೇಕು.

ಮೋದಿಯವರು ಟ್ರಂಪ್ ಮಧ್ಯಸ್ಥಿಕೆಗೆ ಆಮಂತ್ರಿಸಿದ್ದರೆ ಇದು 1972ರ ಶಿಮ್ಲಾ ಒಪ್ಪಂದಕ್ಕೂ ಬಗೆದ ದ್ರೋಹವಾಗುತ್ತದೆ ಎಂದು ಖಂಡಿಸಿದ್ದಾರೆ.

Facebook Comments