ಭಾರತೀಯ ಸಂವಿಧಾನದ ಮೇಲೆ ಕ್ಯಾಬ್ ದಾಳಿ : ರಾಹುಲ್ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.10-ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ (ಕ್ಯಾಬ್) ಅಂಗೀಕಾರದ ಬೆನ್ನಲ್ಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ, ಇದು ಭಾರತೀಯ ಸಂವಿಧಾನದ ಮೇಲೆ ನಡೆದ ಆಕ್ರಮಣವಾಗಿದೆ ಎಂದು ವಿಷಾದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮಸೂದೆಗೆ ಬೆಂಬಲ ನೀಡಿದವರು ಸಹ ಭಾರತೀಯ ಸಂವಿಧಾನದ ಮೇಲೆ ದಾಳಿಗೆ ಕಾರಣರಾಗಿದ್ದಾರೆ. ಮತ್ತು ಸಮಾನತೆಯ ಭದ್ರ ಬುನಾದಿಯನ್ನು ಅಲುಗಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ವಾದ್ರಾ ಪ್ರತಿಕ್ರಿಯಿಸಿ, ಈ ಮಸೂದೆ ಮಂಡನೆ ಮೂಲಕ ಕೇಂದ್ರ ಸರ್ಕಾರ ತನ್ನ ಧರ್ಮ ಶ್ರದ್ಧೆಯನ್ನು ತೋರ್ಪಡಿಸಿದೆ.

ಇದು ಕೋಮುವಾದಕ್ಕೆ ಪ್ರಚೋದನೆ ನೀಡುವ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್‍ನ ಹಿರಿಯ ನಾಯಕ ಪಿ.ಚಿದಂಬರಂ, ಇದು ಸಂಪೂರ್ಣ ಅಸಂವಿಧಾನಿಕ ಕ್ರಮ. ಈ ವಿವಾದದ ಹೋರಾಟ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂದು ಹೇಳಿದ್ದಾರೆ.

Facebook Comments