ಜೆಲ್ಲಿಕಟ್ಟ ವೀಕ್ಷಿಸಿ ಖುಷಿಪಟ್ಟ ರಾಹುಲ್‍ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನೈ,ಜ.14- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡು ರಾಜಕಾರಣಿಗಳ ಬಹುನೆಚ್ಚಿನ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳ ನಾಯಕರು ಒಬ್ಬರ ಮೇಲೊಬ್ಬರಂತೆ ಸರದಿ ಸಾಲಿನಲ್ಲಿ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಇಂದು ಮಧುರೈಗೆ ಭೇಟಿ ನೀಡಿ ಜೆಲ್ಲಿಕಟ್ಟನ್ನು ವೀಕ್ಷಿಸಿ ಖುಷಿಪಟ್ಟರು.

ಭಾರತದ ಭವಿಷ್ಯಕ್ಕಾಗಿ ತಮಿಳರ ಸಂಸ್ಕøತಿ, ಭಾಷೆ, ಇತಿಹಾಸ ಅತ್ಯಗತ್ಯವಾಗಿದೆ. ಇದನ್ನು ನಾವು ಗೌರವಿಸಬೇಕು. ಜೆಲ್ಲಿಕಟ್ಟನ್ನು ಹೊರಾಟದ ಆಟ ಎಂದು ಭಾವಿಸುವವರಿಗೆ ಸ್ಪಷ್ಟವಾದ ಸಂದೇಶ ನೀಡುವ ಸಲುವಾಗಿ ನಾನಿಲ್ಲಿ ಬಂದಿದ್ದೇನೆ ಎಂದು ರಾಹುಲ್‍ಗಾಂಧಿ ಹೇಳಿದ್ದಾರೆ. ಇದೊಂದು ಅತ್ಯಂತ ಮಧುರವಾದ ಅನುಭವ. ವ್ಯವಸ್ಥಿತವಾಗಿ ಯಾವುದೇ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಆಯೋಜನೆ ಮಾಡಿರುವ ಜೆಲ್ಲಿಕಟ್ಟು ಸಂಸ್ಕøತಿಯ ರಾಯಭಾರಿ ಎಂದು ಅವರು ತಿಳಿಸಿದ್ದಾರೆ.

ಸಂಕ್ರಾಂತಿ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆಯುವ ಜೆಲ್ಲಿಕಟ್ಟು ಅತ್ಯಂತ ಸಾಂಪ್ರದಾಯಿಕ ಕ್ರೀಡೆಯಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭವಾಗಿರುವುದರಿಂದ ಈ ಬಾರಿ ಜೆಲ್ಲಿಕಟ್ಟಿನಲ್ಲಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್‍ಭಾಗವತ್ ಸೇರಿದಂತೆ ಅನೇಕ ಧಾರ್ಮಿಕ ನಾಯಕರು ಭಾಗವಹಿಸಿದ್ದರು. ವಿವಿಧ ರಾಜಕೀಯ ಪಕ್ಷಗಳು ತಮಿಳರ ಪೊಂಗಲ್ ಆಚರಣೆಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಅನೇಕ ನಾಯಕರು ಶುಭ ಕೋರಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸರದಿ ಸಾಲಿನಲ್ಲಿ ನಿಂತು ಭೇಟಿ ನೀಡುತ್ತಿದ್ದಾರೆ.

Facebook Comments