ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.19- ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಚೀನಾ ದೇಶ ಗ್ರಾಮವೊಂದು ನಿರ್ಮಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಅವರು ಇಂದು ಟ್ವೀಟ್ ಮಾಡಿ, ರಿಮೆಂಬರ್ ಹಿಸ್ ಪ್ರಾಮಿಸ್-??? (ವಿಲ್ ನಾಟ್ ಲೆಟ್ ದಿ ಕಂಟ್ರಿ ಬೌ),ಎಂದಿರುವ ಮೋದಿಯನ್ನು ನೆನಪಿಸಿಕೊಳ್ಳಿ. ಇದರೊಟ್ಟಿಗೆ ಚೈನೀಸ್ ವಿಲೇಜ್ ಪತ್ರಿಕಾ ವರದಿ ಟ್ಯಾಗ್ ಮಾಡಿ ಲಿಂಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್‍ನ ಮತ್ತೊಬ್ಬ ಮುಖಂಡ ರಣದೀಪ್ ಸುರ್ಜೇವಾಲ, ಈಗ ಮೋದಿಜೀಗೆ ಎಲ್ಲಿದೆ 56 ಇಂಚಿನ ಎದೆ ಎಂದು ತಮ್ಮ ಟ್ವೀಟರ್‍ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಈ ಬಗ್ಗೆ ಸರ್ಕಾರದಿಂದ ಸೂಕ್ತ ಉತ್ತರ ನಿರೀಕ್ಷಿಸುತ್ತೇನೆ. ಅರುಣಾಚಲ ಪ್ರದೇಶದ ಆಳವಾದ ವಿವಾದಿತ ಪ್ರದೇಶದಲ್ಲಿ ಗಡಿಯಲ್ಲಿ ಸುಮಾರು 100 ಮನೆಗಳ ಗ್ರಾಮವನ್ನು ನಿರ್ಮಾಣ ಮಾಡಿದೆ ಎಂದು ಬಿಜೆಪಿ ಸಂಸದ ತಾಪಿರ್ ಗಾವೊ ತಪ್ಪೋಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದು ನಿಜವಾಗಿದ್ದಲ್ಲಿ , ವಿವಾದಿತ ಪ್ರದೇಶವನ್ನು ಚೀನಾದ ಪ್ರಜೆಗಳ ಶಾಶ್ವತ ವಸಾಹತು ಪ್ರದೇಶವನ್ನಾಗಿ ಪರಿವರ್ತಿಸುವ ಮೂಲಕ ಚೀನಿಯರು ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಚಕಿತಗೊಳಿಸುವ ಸಂಗತಿಗಳ ಬಗ್ಗೆ ಸರ್ಕಾರ ಏನು ಹೇಳುತ್ತದೆ ಎಂದು ಟ್ವೀಟರ್‍ನಲ್ಲಿ ಹೇಳಿದ್ದಾರೆ.

3488 ಕಿ.ಮೀ. ಗಡಿ ಸಮಸ್ಯೆ: ಭಾರತ ಮತ್ತು ಚೀನಾ ಗಡಿಯಲ್ಲಿ (ಎಲ್‍ಎಸಿ) 3488 ಕಿ.ಮೀ.ಗಳು ವಿವಾದಿತ ಗಡಿ ಭಾಗಗಳಾಗಿವೆ. ಇದರಲ್ಲಿ ಚೀನಾ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್‍ಗೆ ಸೇರಿದ್ದಾಗಿದೆ ಎಂದು ಹೇಳಿಕೊಳ್ಳುತ್ತಿದೆ ಎಂಬುದು ನೆನಪಿಸಿಕೊಳ್ಳಬೇಕಾಗಿದೆ.

Facebook Comments