ಬಿಜೆಪಿಯನ್ನು ಹೊರಗಿಡಲು ತಮಿಳುನಾಡು ದಾರಿ ತೋರಿಸಲಿ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ನಾಗರ್‍ಕೋಯಿಲ್, ಮಾ.1 (ಪಿಟಿಐ)- ಭಾಷೆ ಮತ್ತು ಸಂಸ್ಕøತಿಗೆ ವಿರುದ್ಧವಾದ ಶಕ್ತಿಗಳನ್ನು ಹಾಗೂ ಒಂದು ಸಂಸ್ಕøತಿ, ಒಂದು ರಾಷ್ಟ್ರ ಮತ್ತು ಒಂದು ಇತಿಹಾಸ ಪರಿಕಲ್ಪನೆ ರೂಪಿಸುವ ಶಕ್ತಿಗಳನ್ನು ದೂರವಿಡುವಲ್ಲಿ ತಮಿಳುನಾಡು ಭಾರತ ದೇಶಕ್ಕೆ ದಾರಿ ತೋರಿಸಬೇಕು ಎಂದು ಪ್ರಧಾನಿ ಮೋದಿಯವರನ್ನು ದೃಷ್ಟಿಯಲ್ಲಿರಿಸಿಕೊಂಡು ರಾಹುಲ್ ಗಾಂಧಿ ಟೀಕಿಸಿದರು.

ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಮವಾರ ಕನ್ಯಾಕುಮಾರಿ ಜಿಲ್ಲೆಯ ನಾಗರ್‍ಕೋಯಿಲ್ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದರು. ತಮಿಳು ಜನರನ್ನು ಹೊರತುಪಡಿಸಿ ಬೇರೆ ಯಾರೂ ತಮಿಳುನಾಡನ್ನು ಆಳಲು ಸಾಧ್ಯವಿಲ್ಲ ಎಂದು ಇತಿಹಾಸ ತೋರಿಸಿದೆ. ಈ ಚುನಾವಣೆಯು ತಮಿಳು ಜನರನ್ನು ನಿಜವಾಗಿಯೂ ಪ್ರತಿನಿಧಿಸುವ ವ್ಯಕ್ತಿ ಮಾತ್ರ ತಮಿಳುನಾಡಿನ ಮುಖ್ಯಮಂತ್ರಿಯಾಗ ಬಲ್ಲರು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಮಸ್ಕರಿಸುವ ಮುಖ್ಯಮಂತ್ರಿ ಪಳನಿಸ್ವಾಮಿ, ಅವರಿಂದ ಇದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಸಿಎಂ ತಲೆಬಾಗಿಸಬೇಕಾದ್ದು, ರಾಜ್ಯದ ಜನತೆ ಮುಂದೆ. ಆರ್‍ಎಸ್ ಮತ್ತು ಮೋದಿ ತಮಿಳು ಭಾಷೆ ಮತ್ತು ಸಂಸ್ಕøತಿಗೆ ಅವಮಾನ ಮಾಡಿದ್ದಾರೆ. ಅವರ ಪಾದ ಈ ಭೂಮಿ ಸ್ಪರ್ಶಿಸಲು ಬಿಡಬಾರದು ಎಂದು ಕಿಡಿಕಾರಿದರು.

ಏ.6 ರಂದು ಏಕಹಂತದಲ್ಲಿ 234 ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್- ಡಿಎಂಕೆಯೊಡನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮೋದಿ ಒಂದು ದೇಶ, ಒಂದು ಸಂಸ್ಕøತಿ, ಒಂದು ಇತಿಹಾಸ ಮತ್ತು ಒಬ್ಬ ಲೀಡರ್‍ನಂತೆ ವರ್ತಿಸುತ್ತಿದ್ದಾರೆ.

ತಮಿಳು, ಬೆಂಗಾಲಿ ಭಾರತೀಯ ಭಾಷೆಗಳಲ್ಲ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ನನ್ನ ಕರ್ತವ್ಯ ತಮಿಳು ಭಾಷೆ, ಸಂಸ್ಕøತಿ, ಇತಿಹಾಸವನ್ನು ರಕ್ಷಿಸುವುದಲ್ಲದೆ, ಈ ದೇಶದ ಎಲ್ಲ ಭಾಷೆ, ಧರ್ಮಗಳನ್ನು ರಕ್ಷಿಸುವುದಾಗಿದೆ ಎಂದರು. ಕಾಂಗ್ರೆಸ್ ಪಕ್ಷ ಹಿರಿಯ ಮತ್ತು ದಿವಂಗತ ಸಂಸದ ಎಚ್. ವಸಂತಕುಮಾರ ಅವರು ಪಕ್ಷ ಮೌಲ್ಯಗಳನ್ನು ಗೌರವಿಸುತ್ತಿದ್ದರು ಎಂದು ಹೇಳಿದ ರಾಹುಲ್, ಕನ್ಯಾಕುಮಾರಿಯಲ್ಲಿರುವ ವಸಂತಕುಮಾರ್ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.

Facebook Comments