ರಾಹುಲ್ ವಿಮಾನ ಎಂಜಿನ್ ದೋಷ: ದೆಹಲಿಗೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.26- ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಪಾಟ್ನಾಗೆ ತೆರಳುತ್ತಿದ್ದ ವಿಮಾನದ ಎಂಜಿನ್ ದೋಷದಿಂದಾಗಿ ದೆಹಲಿಗೆ ಹಿಂದಿರುಗಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಸ್ವತಃ ರಾಹುಲ್‍ಗಾಂಧಿ ಅವರೇ ಟ್ವೀಟರ್‍ನಲ್ಲಿ ಈ ವಿಷಯ ತಿಳಿಸಿ ಪೈಲೆಟ್ ಮತ್ತು ಸಹ ಪೈಲೆಟ್‍ರೊಂದಿಗೆ ತಾವು ಇರುವ ಚಿತ್ರವನ್ನು ಸಹ ಅಪ್‍ಲೋಡ್ ಮಾಡಿದ್ದಾರೆ.

ಚುನಾವಣಾ ಪ್ರಚಾರ ರ್ಯಾಲಿಗಾಗಿ ನಮ್ಮ ವಿಮಾನ ಬಿಹಾರದ ಪಾಟ್ನಾಗೆ ತೆರಳುತ್ತಿತ್ತು. ಆದರೆ, ಎಂಜಿನ್ ಟ್ರಬಲ್ ಕಾರಣ ದೆಹಲಿಗೆ ವಾಪಸಾಯಿತು ಎಂದು ರಾಹುಲ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ಇಂದು ಬಿಹಾರದ ಸಮಷ್ಟಿಪುರ, ಒಡಿಶಾದ ಬಾಲಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‍ನೇರ್‍ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ, ವಿಮಾನದ ಎಂಜಿನ್ ದೋಷದಿಂದಾಗಿ ರಾಹುಲ್ ದೆಹಲಿಗೆ ಹಿಂದಿರುಗಿದ್ದು, ಈ ಮೂರು ನಗರಗಳ ಕಾರ್ಯಕ್ರಮಗಳಲ್ಲಿ ವಿಳಂಬವಾಗಿದೆ. ಇದಕ್ಕಾಗಿ ರಾಹುಲ್ ಕ್ಷಮೆ ಕೋರಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ