ಮಗುವಿದ್ದಾಗ ತನ್ನನ್ನು ಆರೈಕೆ ಮಾಡಿದ್ದ ನರ್ಸ್ ಭೇಟಿ ಮಾಡಿದ ರಾಹುಲ್..!

ಈ ಸುದ್ದಿಯನ್ನು ಶೇರ್ ಮಾಡಿ

ವಯನಾಡು, ಜೂ.9- ಕೇರಳದ ದೇವರ ನಾಡು ವಯನಾಡಿನಲ್ಲಿ ಇಂದು ಬೆಳಗ್ಗೆ ಕಂಡು ಬಂದ ಅಪರೂಪದ ದೃಶ್ಯದಿಂದ ಜನತೆ ಚಕಿತರಾದರು. 49 ವರ್ಷಗಳ ಹಿಂದೆ ಜನಿಸಿದ ತಮ್ಮನ್ನು ಅತ್ಯಂತ ಮುತುವರ್ಜಿಯಿಂದ ಶುಶ್ರೂಷೆ ಮಾಡಿದ್ದ ನಿವೃತ್ತ ನರ್ಸ್ ರಾಜಮ್ಮ ವವತ್ತಿಲ್ (72) ಅವರನ್ನು ರಾಹುಲ್ ಇಂದು ಭೇಟಿ ಮಾಡಿ ಆತ್ಮೀಯವಾಗಿ ಆಲಂಗಿಸಿಕೊಂಡು ಅವರ ಕೈ ಹಿಡಿದು ಭಾವೋದ್ವೇಗಗೊಂಡರು.

ವಯನಾಡಿನ ಸಂಸದರ ಸಮಾಲೋಚನಾ ಕೇಂದ್ರದಲ್ಲಿ ಇಂದು ಬೆಳಗ್ಗೆ ಸಾರ್ವಜನಿಕರಿಂದ ಕುಂದು ಕೊರತೆ ಮತ್ತು ಅಹವಾಲುಗಳನ್ನು ರಾಹುಲ್ ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜಮ್ಮ ಮತ್ತು ಅವರ ಕುಟುಂಬ ವರ್ಗ ರಾಹುಲ್ ಅವರನ್ನು ಭೇಟಿ ಮಾಡಿದರು.

ನವಜಾತ ಶಿಶುವಾಗಿದ್ದ ತಮ್ಮನ್ನು ಅತ್ಯಂತ ಅಕ್ಕರೆಯಿಂದ ಆರೈಕೆ ಮಾಡಿದ ರಾಜಮ್ಮ ಅವರನ್ನು ರಾಹುಲ್ ಆತ್ಮೀಯವಾಗಿ ಮಾತನಾಡಿಸಿ ಆಲಂಗಿಸಿಕೊಂಡು ಅವರ ಖೈ ಹಿಡಿದು ಕೃತಜ್ಞತೆ ಸಲ್ಲಿಸಿದರು.

ಜೂ.19 1970ರಲ್ಲಿ ರಾಹುಲ್ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದರು. ಆಗ ರಾಜಮ್ಮ ಅಲ್ಲಿ ಟ್ರೈನಿ ನರ್ಸ್ ಆಗಿದ್ದರು. ನವಜಾತ ರಾಹುಲ್‍ರನ್ನು ನೋಡಿಕೊಳ್ಳುವ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು.

ಆ ಸಂದರ್ಭವನ್ನು ರಾಹುಲ್ ಬಳಿ ರಾಜಮ್ಮ ಹಂಚಿಕೊಂಡಾಗ ಅವರಿಬ್ಬರ ನಡುವೆ ಭಾವನಾತ್ಮಕ ಸಂತಸದ ಕ್ಷಣಗಳು ಮನೆ ಮಾಡಿದ್ದವು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin