ಟ್ವಿಟರ್‌ನಲ್ಲಿ ಮೋದಿ ವಿರುದ್ಧ ಮುಂದುವರೆದ ರಾಹುಲ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.12- ಮಾವಿನಹಣ್ಣು ತಿನ್ನುವುದು ಸರಿ, ಆದರೆ ಜನ ಸಾಮಾನ್ಯರನ್ನು ಬಿಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ಷೇಪಿಸಿದ್ದಾರೆ. ಟ್ವಿಟರ್‍ನಲ್ಲಿ ಈ ಬಗ್ಗೆ ಮಾರ್ಮಿಕ ಪ್ರಶ್ನೆಗಳನ್ನು ಎತ್ತಿರುವ ರಾಹುಲ್ ಗಾಂಧಿ, ಕೊರೊನಾದ ಮೇಲೆ ನಿಯಂತ್ರಣ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಲಸಿಕೆ ಇಲ್ಲ. ಉದ್ಯೋಗಗಳು ಇಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.

ರೈತರು ಮತ್ತು ಕಾರ್ಮಿಕರು ಕಷ್ಟ ಸುಖಗಳನ್ನು ವಿಚಾರಿಸುತ್ತಿಲ್ಲ. ಸೂಕ್ಷ್ಮ. ಸಣ್ಣ, ಮಧ್ಯಮ ಕೈಗಾರಿಕೆಗಳು ಸುರಕ್ಷಿತವಲ್ಲ. ಮಧ್ಯಮ ವರ್ಗ ಸಮಾಧಾನದಿಂದ ಇಲ್ಲ. ಇದೆಲ್ಲದರ ನಡುವೆ ಮಾವಿನ ಹಣ್ಣು ತಿನ್ನುವುದು ಸರಿ. ಆದರೆ ನೀವು ಸಾಮಾನ್ಯ ಜನರನ್ನೇಕೆ ಮರೆತಿದ್ದೀರಾ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಪ್ರಚಾರದ ಬಹಿರಂಗ ಸಭೆಗಳಲ್ಲಿ ಹೆಚ್ಚು ವಾಗ್ದಾಳಿ ನಡೆಸದ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರವನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮದೇ ಶೈಲಿಯಲ್ಲಿ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ.

ಪ್ರತಿಯೊಂದು ವಿಷಯಕ್ಕೂ ಮೊನಚು ಟೀಕೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆಗಳನ್ನು ರಾಹುಲ್ ಎದರಿಸಿದ್ದಾರೆ.

Facebook Comments

Sri Raghav

Admin