ಮೋದಿ ಅಸತ್ಯಾಗ್ರಹಿ : ರಾಹುಲ್ ಗಾಂಧಿ ಟ್ವೀಟ್ ಅಟ್ಯಾಕ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.11- ಮಧ್ಯಪ್ರದೇಶದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಸೌರ ವಿದ್ಯುತ್ ಘಟಕದ ಯೋಜನೆಯನ್ನು ಉದ್ಘಾಟನೆ ಮಾಡಲಾಗಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದಲ್ಲಿ ನಿರ್ಮಾಣವಾಗಿರುವ 750 ಮೆಗಾವ್ಯಾಟ್ ಸಾಮಥ್ರ್ಯದ ರೇವ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಘಟಕವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಇದಕ್ಕೆ ಟ್ವಿಟರ್‍ನಲ್ಲಿ ವಾಗ್ದಾಳಿ ನಡೆಸಿರುವ ಅವರು, ಅಸತ್ಯಗ್ರಹಿ(ಸತ್ಯವನ್ನೇ ಹೇಳದವರು) ಟ್ಯಾಗ್‍ನಡಿ ರೇವ ಸೋಲಾರ್ ವಿದ್ಯುತ್ ಯೋಜನೆಯನ್ನು ನರ್ಮದ ಮತ್ತು ಬಿಳಿಹುಲಿಯ ಗುರುತಿಸಿದಂತೆ ಹೇಳಿದ್ದಾರೆ. ಇದು ಏಷ್ಯಾದಲ್ಲೇ ಹೇಗೆ ಅತ್ಯಂತ ದೊಡ್ಡ ಸೌರ ವಿದ್ಯುತ್ ಘಟಕವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ತುಮಕೂರು ಜಿಲ್ಲೆಯ ಪಾವಗಡದಲ್ಲಿ 2000 ಮೆ.ವ್ಯಾ ಸೌರ ವಿದ್ಯುತ್ ಪಾರ್ಕ್‍ನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ರೇವ ಸೌರ ವಿದ್ಯುತ್ ಪಾರ್ಕ್ 750 ಮೆಗಾ ವ್ಯಾಟ್ ಯೋಜೆನಯಾಗಿದ್ದು, ಇದು ಏಷ್ಯಾದಲ್ಲೆ ಅತಿದೊಡ್ಡ ಯೋಜನೆಯಾಗಲು ಹೇಗೆ ಸಾಧ್ಯ. ಕೇಂದ್ರ ಇಂಧನ ಸಚಿವರು ಸ್ಪಷ್ಟನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin