ದೇಶದ ಭದ್ರತೆಗೆ ಧಕ್ಕೆಯಾಗಿದ್ದರೂ ಚರ್ಚೆಯಲ್ಲೆ ಸಮಯ ಕಳೆಯುತ್ತಿರುವ ಸರ್ಕಾರ: ರಾಹುಲ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.19- ಪೂರ್ವ ಲಡಾಕ್ ಪ್ರದೇಶದ ಕೆಲ ಜಾಗಗಳಿಂದ ಸೇನೆ ಹಿಂತೆಗೆಯಲು ನಿರಾಕರಿಸಿರುವ ಚೀನಾದ ನಡವಳಿಗೆ ಭಾರತದ ರಾಷ್ಟ್ರೀಯ ಭದ್ರತೆಗೆ ಭಾರಿ ಬೆದರಿಕೆ ಒಡ್ಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂ ಆತಂಕ ವ್ಯಕ್ತ ಪಡಿಸಿದ್ದಾರೆ. ಪೂರ್ವ ಲಡಾಕ್‍ನ ದಿಪ್ಸಂಗ್ ಬಯಲು ಪ್ರದೇಶದ ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ ಪೋಸ್ಟ್‍ಗಳಿಂದ ಸೇನೆಯನ್ನು ಹಿಂಪಡೆಯಲು ಚೀನಾ ಸರ್ಕಾರ ನಿರಾಕರಿಸಿದೆ.

ಈವರೆಗೂ ಏನು ನಡೆದಿದೆಯೋ ಅದಕ್ಕೆ ಭಾರತ ತೃಪ್ತಿ ಪಟ್ಟುಕೊಳ್ಳಬೇಕು ಎಂದು ಚೀನಾ ಹೇಳಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಚೀನಾ ಭಾರತೀಯ ಗಡಿ ಭಾಗದಲ್ಲಿ ತನ್ನ ಪುಂಡಾಟಿಕೆ ಪ್ರದರ್ಶನ ಮಾಡಿತ್ತು, ಭಾರತೀಯ ಸೇನೆಯ 20ಕ್ಕೂ ಹೆಚ್ಚು ಯೋಧರು ವೀರಮರಣವನ್ನಪ್ಪಿದರು. ಎರಡು ದೇಶಗಳು ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡಿದ್ದವು. ಯುದ್ಧೋನ್ಮಾದದ ವಾತಾವರಣ ನಿರ್ಮಾಣವಾಗಿತ್ತು.

ಎರಡು ದೇಶಗಳ ಸೇನಾಕಾರಿಗಳ ನಡುವೆ ನಡೆದ ಮಾತುಕತೆಯ ಫಲವಾಗಿ ಸೇನೆ ಹಿಂತೆಗೆತ ಆರಂಭವಾಗಿತ್ತು. ವಿವಾದಿತ ಪ್ರದೇಶದಿಂದ ಭಾರತ ತನ್ನ ಸೇನೆ ಹಾಗೂ ಯುದ್ಧ ಸಲಕರಣೆಗಳನ್ನು ವಾಪಾಸ್ ಕರೆಸಿಕೊಂಡಿತ್ತು. ಆದರೆ ಚೀನಾ ಭಾಗಶಃ ಮಾತ್ರ ಸೇನೆ ವಾಪಾಸ್ ಪಡೆದಿದ್ದು ಎರಡು ವಿವಾದಿತ ಪ್ರದೇಶಗಳಲ್ಲಿ ಸೇನೆಯ ಕ್ಯಾಂಪ್ ಮುಂದುವರೆಸಿದೆ.

ಈ ಬಗ್ಗೆ ಗಂಭೀರವಾಗಿ ಟ್ವಿಟ್ ಮಾಡಿರುವ ರಾಹುಲ್ ಗಾಂ, ಚೀನಾ ಆಕ್ರಮಿತ ಗೋಗ್ರಾ ಹಾಗೂ ಹಾಟ್ ಸ್ಪ್ರೀಂಗ್ಸ್ ಪ್ರದೇಶದಿಂದ ಸೇನೆಯನ್ನು ಹಿಂಪಡೆದಿಲ್ಲ. ಇದು ದೇಶದ ಯುದ್ಧ ತಂತ್ರಕ್ಕೆ ಆತಂಕ ತಂದೊಡ್ಡಿದೆ. ಡಿಬಿಒದ ವಾಯು ಸೇನೆಯ ಕಾರ್ಯತಂತ್ರಕ್ಕೂ ಆತಂಕ ಎದುರಾಗಲಿದೆ ಎಂದು ರಾಹುಲ್ ಗಾಂ ಹೇಳಿದ್ದಾರೆ.

ದೇಶದ ಭದ್ರತೆಗೆ ಆತಂಕ ಎದುರಾಗಿದ್ದರೂ ಕೇಂದ್ರ ಸರ್ಕಾರ ಮಾತುಕತೆಯಲ್ಲಿ ಸಮಯ ವ್ಯಥ್ರ್ಯ ಮಾಡುತ್ತಿದೆ. ನಮ್ಮ ದೇಶಕ್ಕೆ ಇದಕ್ಕಿಂತಲೂ ಹೆಚ್ಚಿನದು ಬೇಕಿದೆ ಎಂದು ರಾಹುಲ್ ಹೇಳಿದ್ದಾರೆ.

Facebook Comments