ಆಶಿಕಿ ನಟ ರಾಹುಲ್‍ರಾಯ್ ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ. 30- ಎಲ್ ಎ ಸಿ- ಲಿವ್ ದಿ ಬ್ಯಾಟಲ್ ಇನ್ ದಿ ಕಾರ್ಗಿಲ್ ಎಂಬ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ರಾಹುಲ್ ರಾಯ್‍ಗೆ ಬ್ರೇನ್ ಸ್ಟ್ರೋಕ್ ಆಗಿದ್ದು ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶಿಕಿ ಚಿತ್ರದ ನಂತರ ಹೆಂಗಳೆಯರ ದಿಲ್ ಗೆದ್ದಿದ್ದ ರಾಹುಲ್‍ರಾಯ್ ನಂತರ ಜುನೂನ್, ಗೂಮ್ರಾ, ಅಗ್ರಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಪ್ರಸ್ತುತ ಎಲ್‍ಎಸಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಎಲ್‍ಎಸಿ ಚಿತ್ರದ ಚಿತ್ರೀಕರಣವು ಕಾರ್ಗಿಲ್‍ನಲ್ಲಿ ನಡೆಯುತ್ತಿದ್ದು ರಾಹುಲ್‍ರಾಯ್ ಅವರು ಕೂಡ ಭಾಗಿಯಾಗಿದ್ದರು, ಕಾರ್ಗಿಲ್‍ನಲ್ಲಿ ವಿಪರೀತ ಚಳಿ ಇದ್ದುದ್ದರಿಂದ ರಾಯ್‍ಗೆ ಬ್ರೇನ್ ಸ್ಟ್ರೋಕ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಹುಲ್ ರಾಯ್‍ರ ಸೋದರ ರೋರ್ಮಿ ಸೇನ್ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಣ್ಣ ಚೇತರಿಸಿಕೊಳ್ಳುತ್ತಿದ್ದಾರೆ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಶೀಘ್ರ ಅವರು ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಟ ನಿಶಾಂತ್‍ಸಿಂಗ್ ಮಾತನಾಡಿ, ಕಳೆದ ರಾತ್ರಿಯಷ್ಟೇ ನಾವು ರಾಹುಲ್ ರಾಯ್‍ರೊಂದಿಗೆ ಊಟ ಮಾಡಿದ್ದೆವು, ಆದರೆ ಶೂಟಿಂಗ್ ವೇಳೆಯೇ ಅವರಿಗೆ ಬ್ರೇನ್ ಸ್ಟ್ರೋಕ್ ಉಂಟಾಗಿದೆ, ಅವರು ಬಲುಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

Facebook Comments