ಪ್ರಧಾನಿ ಹುದ್ದೆಗೆ ರಾಹುಲ್ ಹೆಸರು ಕೈ ಒಗ್ಗಟ್ಟಿಗೆ ಆಘಾತ

ಈ ಸುದ್ದಿಯನ್ನು ಶೇರ್ ಮಾಡಿ

Ananth-Kumar

ನವದೆಹಲಿ, ಜು.23-ಪ್ರಧಾನಿ ಹುದ್ದೆಗೆ ರಾಹುಲ್‍ಗಾಂಧಿಯವರನ್ನು ಹೆಸರಿಸಿರುವುದು ಪ್ರತಿಪಕ್ಷಗಳ ಒಗ್ಗಟ್ಟಿಗೆ ದೊಡ್ಡ ಆಘಾತ ನೀಡಿದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿದ್ದಾರೆ. ಸಂಸತ್ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಕೇಂದ್ರೀಯ ಸಮಿತಿ ಸಭೆಯ ಏಕಪಕ್ಷೀಯ ನಿರ್ಧಾರ ಪ್ರತಿಪಕ್ಷಗಳ ಒಗ್ಗಟ್ಟಿಗೆ ಆಘಾತಕಾರಿಯಾಗಿ ಪರಿಣಮಿಸಿದೆ. ಅವರ ನಡುವಿನ ಒಗ್ಗಟ್ಟಿನಲ್ಲಿ ಈ ವಿಚಾರ ಪ್ರಶ್ನೆಯಂತಾಗಿದೆ ಎಂದರು.
ಅವಿಶ್ವಾಸ ನಿರ್ಣಯದಲ್ಲಿ ನಿರೀಕ್ಷೆಗೂ ಮೀರಿ ನರೇಂದ್ರ ಮೋದಿಯವರಿಗೆ ಬೆಂಬಲ ದೊರೆತಿರುವುದು ಅವರಿಗಾಗಿರುವ ಮೊದಲ ಭೂಕಂಪ. ಇದೀಗ ರಾಹುಲ್ ಅವರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಮೂಲಕ ಅವರಲ್ಲಿನ ಒಗ್ಗಟ್ಟಿಗೆ ಎರಡನೇ ಭೂಕಂಪ ಎದುರಾಗಿದೆ.

ಹೀಗಾಗಿ ಅವರೇ ಕೈಗೊಂಡಿರುವ ಏಕಪಕ್ಷೀಯ ನಿರ್ಣಯ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಒಡಕು ತಂದಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್‍ನ್ನು ಇತರೆ ಪಕ್ಷಗಳು ತ್ಯಜಿಸಲಿವೆ ಎಂದು ಭವಿಷ್ಯ ನುಡಿದರು. ಸುಳ್ಳು ಆರೋಪ:ರಫೆಲ್ ಒಪ್ಪಂದ ವಿಷಯದಲ್ಲಿ ಪ್ರತಿಪಕ್ಷಗಳ ಸದಸ್ಯರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಪಾರದರ್ಶಕ ಒಪ್ಪಂದವಾಗಿದ್ದು, ಈಗಾಗಲೇ ರಕ್ಷಣಾ ಸಚಿವರು ಇದಕ್ಕೆ ಸಮರ್ಪಕ ಉತ್ತರ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin