ಮಾರಣಾಂತಿಕ ಹಲ್ಲೆಗೊಳಗಾದ ಯುವಕನಿಗೆ ತಾವೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ


ರಾಯಚೂರು. ಜೂ. 27 : ಮಸ್ಕಿ ಪಟ್ಟಣದ ಮುದಗಲ್ ರಸ್ತೆ ಯ ಅಶೋಕ ಶಿಲಾಶಾಸನದ ಬಳಿ ಯುವಕನೋರ್ವನ ಕೊಲೆಮಾಡಲು ಯತ್ನಿಸಿದ ಘಟನೆ ಬುಧವಾರ ಬೆಳಗಿನ ಜಾವ ನಡೆದ ಘಟನೆ ನಡೆದಿದೆ. ಯುವಕನ ಮೇಲೆ ಮಾರಾಂತಿಕ ಹಲ್ಲೆ ನಡೆಸಲಾಗಿದೆ. ಯುವಕನ ಗುರುತು ಪತ್ತೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಬ್ ಇನ್ ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ ಹಾಗೂ ಸಿಪಿಐ ಚನ್ನಯ್ಯ ಹಿರೇಮಠ ಆಗಮಿಸಿದರು. ತೀವ್ರ ಗಾಯಗೊಂಡ ಯುವಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಲ್ಲದೇ ಸ್ವತಃ ಚಿಕಿತ್ಸೆಗೆ ಸಾಥ್ ನೀಡಿ ಮಾನವೀಯತೆ ಮೆರೆದರು.

Police--01

ಮಾರಾಂತಿಕ ಹಲ್ಲೆಗೊಳಗಾದ ಯುವಕನನ್ನು ತಮ್ಮ ವಾಹನದಲ್ಲಿ ಮಸ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ ಸರ್ಕಲ್ ಇನ್ಸ್ ಪೆಕ್ಟರ್ ಚನ್ನಯ್ಯ ಹಿರೇಮಠ, ಸಬ್ ಇನ್ ಸ್ಪೆಕ್ಟರ್ ‌ಅಮರೇಶ ಹುಬ್ಬಳ್ಳಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದರು. ತೀವ್ರ‌ ಹಲ್ಲೆಗೆ ಒಳಗಾದ ಯುವಕನ ಪತ್ತೆ ಹಾಗೂ ಕೊಲೆ ಆರೋಪಿ ಪತ್ತೆ ಗಾಗಿ ಪೋಲೀಸ್ ತನಿಖಾ ತಂಡ ರಚಿಸಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವಕನಿಗೆ ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Facebook Comments

Sri Raghav

Admin