ರೈಲ್ವೆ ಮಂಡಳಿಗೆ ಸರ್ಜರಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.20- ಬಿಳಿಆನೆ ಎಂಬ ಟೀಕೆಗೆ ಗುರಿಯಾಗಿದ್ದ, ರೈಲ್ವೆ ಮಂಡಳಿ ತನ್ನ ಸಾಮಥ್ರ್ಯವನ್ನು ಶೇ. 25ರಷ್ಟು ಇಳಿಸಿದೆ. ಅಲ್ಲದೆ 200 ಮಂದಿ ಸಿಬ್ಬಂದಿ ಸಂಖ್ಯೆಯನ್ನು 150ಕ್ಕೆ ತಗ್ಗಿಸಿದೆ. ನಿರ್ದೇಶಕರ ಮಟ್ಟದ ಉನ್ನಾಧಿಕಾರಿಗಳನ್ನು ವಿವಿಧ ವಲಯಗಳಿಗೆ ಎತ್ತಂಗಡಿ ಮಾಡಿದೆ.

ರೈಲ್ವೆ ಮಂಡಳಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿಯ ಅತ್ಯುನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ 19ವರ್ಷಗಳ ಹಿಂದೆಯೇ ರೈಲ್ವೆ ಮಂಡಳಿ ಗಾತ್ರವನ್ನು ಕುಗ್ಗಿಸಲು ನಿರ್ಧರಿಸಿದ್ದರು. ಆದರೆ ಈ ಬದಲಾವಣೆ ನೆನೆಗುದಿಗೆ ಬಿದ್ದಿತ್ತು. ಈಗ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು ಮಂಡಳಿಗೆ ಸರ್ಜರಿ ಮಾಡಲಾಗಿದೆ.

Facebook Comments