ರೈಲಿನ ಸೋರುತ್ತಿದ್ದ ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಡಿ.3- ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲ್ವೆಯ ಇಂಜಿನ್ ಇಂಧನ ಸೋರಿಕೆಯಿಂದ ಬೆಂಗಳೂರಿಗೆ ಹೊರಡುವ ರೈಲು ಯಲವಿಗಿ ರೈಲ್ವೇ ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು, ಡಿಸೇಲ್ ತುಂಬಿಕೊಳ್ಳುವಲ್ಲಿ ಸಾರ್ವಜನಿಕರು ಮುಗಿಬಿದ್ದಿರುವ ದೃಶ್ಯವೊಂದು ಕಂಡು ಬಂದಿತು.

ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರು ಹೊರಡುವ 56516 ರೈಲಿನ ಇಂಜಿನನಲ್ಲಿ ಇಂಧನ ಸೋರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು.

ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್, ಕೊಡಗಳನ್ನು ತೆಗೆದುಕೊಂಡು ಡಿಸೇಲ್ ತುಂಬಿಕೊಳ್ಳುವಲ್ಲಿ ಮುಂದಾಗಿರುವುದು ಯಲವಿಗಿ ರೈಲ್ವೇ ನಿಲ್ದಾಣದಲ್ಲಿ ಕಂಡು ಬಂದಿದ್ದು, ಇಂಜಿನ್ ಇಂಧನ ಸೋರಿಕೆಯಿಂದಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.

Facebook Comments