ರೈಲ್ವೆ ಪ್ರಯಾಣಿಕರಲ್ಲಿ ದರೋಡೆಕೋರರ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10- ನಗರದ ಕೆ.ಆರ್.ಪುರ ಮತ್ತು ಕೆಂಗೇರಿ ರೈಲ್ವೆ ನಿಲ್ದಾಣಗಳ ನಡುವೆ ರೈಲ್ವೆ ಪ್ರಯಾಣಿಕರ ದರೋಡೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಆಗಾಗ್ಗೆ ಈ ರೈಲ್ವೆ ನಿಲ್ದಾಣಗಳ ಮಧ್ಯೆ ದರೋಡೆಕೋರರು ಪ್ರಯಾಣಿಕರ ಬ್ಯಾಗು, ಮೊಬೈಲ್, ಹಣ, ಆಭರಣಗಳನ್ನು ಕಿತ್ತುಕೊಂಡು ಅವರನ್ನು ಕೆಳಗೆ ತಳ್ಳಿ ಪರಾರಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ.

ಈಗಾಗಲೇ ಸೈನಿಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ಅವರುಗಳನ್ನು ರೈಲಿನಿಂದ ತಳ್ಳಿ ಅವರ ಮೊಬೈಲ್, ಬ್ಯಾಗ್, ಹಣ ಕಿತ್ತುಕೊಂಡು ದರೋಡೆಕೋರರು ಓಡಿ ಹೋಗಿದ್ದಾರೆ.ಕಾರು ಮತ್ತು ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುಖಕರ ಎಂದು ಬರುವ ಪ್ರಯಾಣಿಕರಿಗೆ ಈ ದರೋಡೆ ಪ್ರಕರಣಗಳಿಂದ ಆತಂಕ ಉಂಟಾಗಿದೆ.  ಅದರಲ್ಲೂ ಬೆಂಗಳೂರು ನಗರ ಮಧ್ಯ ಭಾಗದ ನಿಲ್ದಾಣಗಳಲ್ಲಿ ಈ ದರೋಡೆ ಪ್ರಕರಣಗಳು ನಡೆಯುತ್ತಿರುವುದು ಪ್ರಯಾಣಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

Facebook Comments