ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಜಮ್ಮು, ಸೆ.24-ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವೆಡೆ ಭಾರೀ ಮಳೆ, ಹಠಾತ್ ಪ್ರವಾಹ ಹಾಗೂ ಭೂಕುಸಿತಗಳಿಂದ ಅಪಾಯದಲ್ಲಿರುವವರ ರಕ್ಷಣೆ ಕಾರ್ಯ ಮುಂದುವರಿದಿದೆ. ಕಾಶ್ಮೀರ ಕತುವಾದಲಿ ಭಾರೀ ಮಳೆ ಮತ್ತು ಹಠಾತ್ ಪ್ರವಾಹದಿಂದ ಅಪಾಯಕ್ಕೆ ಸಿಲುಕಿದ್ದ 29 ಜನರನ್ನು ಇಂದು ರಕ್ಷಿಸಲಾಗಿದೆ.

ಕತುವಾ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಂದ ಆರು ಮಹಿಳೆಯರು ಮತ್ತು 10 ಮಕ್ಕಳೂ ಸೇರಿದಂತೆ ಒಟ್ಟು 29 ಜನರನ್ನು ನಿನ್ನೆ ರಾತ್ರಿಯಿಂದ ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಜಿಲ್ಲೆಯ ನಗ್ರಿ, ಚಬ್ಬೆ ಚಾಕ್ ಮತ್ತು ಜಾಖೋಲೆ ಹಾಗೂ ಬಿಲ್ಲಾವಾರ್ ಪ್ರದೇಶಗಳಿಂದ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಮತ್ತು ರಾಜ್ಯ ವಿಪತ್ತಿ ಸ್ಪಂದನೆ ಪಡೆ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ. ಈ ಮಧ್ಯೆ ವಿವಿಧ ಸ್ಥಳಗಳಲ್ಲಿ ಭೂಕುಸಿತಗಳಿಂದಾಗಿ ಮುಚ್ಚಲಾಗಿದ್ದ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಇಂದು ಸಂಚಾರಕ್ಕೆ ಮುಕ್ತವಾಗಿದೆ.

ಹಿಮಾಚಲದಲ್ಲಿ ಭೂಕುಸಿತ :
ಹಿಮಾಚಲ ಪ್ರದೇಶದ ವಿವಿಧೆಡೆ ಭಾರೀ ಮಳೆ, ಪ್ರವಾಸ ಹಾಗೂ ಭೂಕುಸಿತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ. ಕಂಗ್ರಾ, ಮಂಡಿ, ಹರೀಮ್‍ಪುರ್ ಸೇರಿದಂತೆ ಅನೇಕ ಭಾಗಗಳಲ್ಲಿ ನದಿಗಳು ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿದ್ದು, ವಾಹನಗಳು ಕೊಚ್ಚಿಕೊಂಡು ಹೋಗಿವೆ. ತೊಂದರೆಗೆ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ.
ಪಂಜಾಬ್‍ನಲ್ಲೂ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ.

Facebook Comments

Sri Raghav

Admin