ಉಪಾಯ ಮಾಡಿ ಮಳೆನೀರು ಸಂಗ್ರಹಿಸಿ, ನೀರಿನ ಬರ ನೀಗಿಸಿ…!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, -ಬಿರು ಬೇಸಿಗೆ ಬಂದೇ ಬಿಟ್ಟಿದೆ, ನೀರಿನ ಒಂದು ಹನಿಯೂ ಅತ್ಯಮೂಲ್ಯ, ಜಿಲ್ಲೆಯ ಬಹುತೇಕ ಗ್ರಾಮ ಪಟ್ಟಣದಲ್ಲಿ ನೀರಿನ ಕೊರತೆ ಮಿತಿಮೀರಿದೆ. ಪರಿಸ್ಥಿತಿ ಹೀಗಿರುವಾಗ ನಗರದ ಹಾಸನ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡದ ಚಾವಣಿ ಮೇಲೆ ಮಳೆ ನೀರು ಬಿದ್ದು ಪೂಲಾಗುವುದನ್ನು ತಪ್ಪಿಸಿ ಮಳೆ ನೀರು ಕೂಯ್ಲು ಪದ್ದತಿ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ.

ಕಟ್ಟಡ ಕಾಮಗಾರಿ ಪೂರ್ಣವಾದ ಬಳಿಕೆ ಇಲ್ಲಿಯ ವರೆಗೆ ಲಕ್ಷಾಂತರ ಲೀಟರ್ ನೀರು ಬಳಸಲಾಗುತ್ತಿದೆ. ಇದರ ಪೂರ್ಣ ಪ್ರಮಾಣದಲ್ಲಿ ಇದರ ಸದ್ಬಳಕೆ ಮಾಡುವ ಮೂಲಕ ಮಾದರಿಯಾಗಿದೆ.

1 ಲಕ್ಷ ಲೀಟರ್ ಸಾಮಥ್ರ್ಯ: ಮಳೆ ನೀರು ಸಂಗ್ರಹ ಘಟಕವನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದು ಹಿಮ್ಸ್ ಸಂಸ್ಥೆ ಗೆ ಹಸ್ತಾಂತರಿಸಲಾಗಿದೆ.

ಘಟಕವನ್ನು 19.50ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 1 ಲಕ್ಷ ಲೀಟರ್ ಮಳೆ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ ಎಂದು ಮಾಹಿತಿ ನೀಡುತ್ತಾರೆ ಉಸ್ತುವಾರಿ ಹಾಗೂ ನಿರ್ವಹಣೆ ಹೊಣೆಹೊತ್ತಿರುವ ಹಿಮ್ಸನ ಅಧಿಕಾರಿ ಜಯಲಕ್ಷ್ಮಿ.

# ಆಸ್ಪತ್ರೆ-ಕಾಲೇಜಿಗೆ ಶುದ್ಧ ನೀರು :  ನೀರನ್ನು ಮೇಲೆತ್ತಲು ಸಬ್ ಮರ್ಸೆಬಲ್ ಪಂಪ್ ಅಳವಡಿಸಲಾಗಿದ್ದು ಸಂಗ್ರಹವಾದ ಪ್ರತಿ ಹನಿ ನೀರನ್ನು ವಿತರಣೆ ಮಾಡುವ ಮುನ್ನಾ ಘಟಕದ ಸಮೀಪದಲ್ಲೆ ಅಳವಡಿಸಿರುವ ಫಿಲ್ಟರ್ ಮೂಲಕ ಶುದ್ಧೀಕರಣ ಮಾಡಿ ನಂತರ ಆಸ್ಪತ್ರೆ, ಕಾಲೇಜ್ ಕ್ಯಾಂಟಿನ್, ಹಾಗೂ ಕಾಲೇಜು ಕಟ್ಟಡ ಪ್ರತಿಯೊಂದು ಟ್ಯಾಂಕಗೆ ಈ ನೀರನ್ನೆ ಬಳಸಲಾಗುತ್ತಿದೆ.

ಆಸ್ಪತ್ರೆಯ ಒಳಾಂಗಣದಲ್ಲಿ ಹಾಗೂ ಕಾಲೇಜು ಕಟ್ಟಡದಲ್ಲಿ ಸುಮಾರು 12 ಶುದ್ಧೀಕರಣ ಘಟಕಗಳು ಇದ್ದು ಅವುಗಳಿಗೆ ಇದೇ ನೀರು ಸರಬರಾಜು ಮಾಡಲಾಗುತ್ತಿದೆ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗೆ ಶುದ್ಧವಾದ ನೀರಿನ ಲಭ್ಯತೆಯಾಗುತ್ತಿದೆ.

ಇನ್ನು ಈ ಘಕದ ಮೂಲಕ ಪ್ರತಿದಿನ 6 ರಿಂದ 7 ಸಾವಿರ ಲೀಟರ್ ನೀರು ಪಂಪ್ ಮಾಡಲಾಗುತ್ತಿದ್ದು ತಿಂಗಳಿಗೆ ಸರಿಸುಮಾರು 2.50 ಲಕ್ಷ ಲೀಟರ ನೀರು ಪಡೆಯಲಾಗುತ್ತದೆ. ಕಳೆದ ನಾಲ್ಕು ತಿಂಗಳಿನಲ್ಲಿ ಸುಮಾರು 12ಲಕ್ಷ ಲೀಟರ್ ಮಳೆನೀರು ಸಂಗ್ರಹವಾಗಿ ಬಳಕೆ ಮಾಡಲಾಗುತ್ತಿದೆ ಎಂದು ವಿವರಿಸುತ್ತಾರೆ ಘಟಕದ ನೀರು ಸರಬರಾಜು ನಿರ್ವಹಣೆ ಮಾಡುತ್ತಿರುವ ಪ್ಲಂಬರ್ ರತನ್.

ಒಟ್ಟಾರೆ ಜೀವಜಲ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ .. ಪ್ರಪಂಚದ ಹಲವು ನಗರ ನೀರಿನ ಕೊರತೆಯಿಂದ ನಲುಗುತ್ತಿದೆ. ಮುಂದಿನ ಕೆಲವೇ ಕೆಲವು ವರ್ಷದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕುಡಿವ ನೀರಿಗೂ ಹಾಹಾಕಾರ ಎದುರಾಗಲಿದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಮಳೆ ನೀರು ಸದ್ಬಳಕೆ ಅತ್ಯಾವಶ್ಯಕವಾಗಿದೆ . ಸರ್ಕಾರವೆನೋ ಮಳೆ ನೀರು ಸಂಗ್ರಹಣೆಗೆ ಮಳೆ ಕೊಯಿಲು ಘಟಕವನ್ನು ಪ್ರತಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಟ್ಟದ ಆವರಣದಲ್ಲಿ ನಿರ್ಮಿಸಲು ಸುತ್ತೋಲೆ ಹೊರಡಿಸಿತ್ತು ಹಾಗೂ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಬಳಕೆ ಮಾಡಲಾಗುತ್ತಿದೆ ಇನ್ನೂ ಕೆಲವು ಘಟಕ ನಿರ್ವಹಣೆ ಕೊರತೆ ಕಾರಣ ವಿಫಲವಾಗಿರುವ ಉದಾಹರಣೆ ಸಾಕಷ್ಟಿದೆ.

ಇನ್ನಾದರು ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು ಎಚೆ್ಚ್ತುತ್ತು ಮಳೆ ನೀರು ಸಂಗ್ರಹಕ್ಕೆ ಹಾಗೂ ಬಳಕೆ ಬಗ್ಗೆ ಅರಿವು ಮೂಡಿಸಬೇಕಿದೆ ಮತ್ತು ಹಿಮ್ಸï ರೀತಿಯಲ್ಲಿ ಸರ್ಕಾರದ ಪ್ರತಿ ಕಟ್ಟಡದಲ್ಲಿ ಹಾಗೂ ನಗರ ಪಟ್ಟಣದ ಸಾರ್ವಜನಿಕರು ತಮ್ಮ ಕಟ್ಟಡದಲ್ಲಿ ಮಳೆ ಸಂಗ್ರಹ ಘಟಕವನ್ನು ಅಳವಡಿಸಿದರೆ ಉತ್ತಮ ಹಾಗೂ ಸೋಲಾರ ಘಟಕಕ್ಕೆ ನೀಡುವ ಸಬ್ಸಿಡಿ ರೀತಿಯಲ್ಲಿ ಮಳೆ ನೀರು ಸಂಗ್ರಹ ಘಟಕಕ್ಕೂ ನೀಡಿದರೆ ಉತ್ತೇಜಿಸಿದಂತಾಗಲಿದೆ ಹಾಗೂ ಮಳೆ ನೀರಿನ ಸದ್ಭಳಕೆಯಾಗಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

-ಸಂತೋಷ್ ಸಿ ಬಿ. ಹಾಸನ

Facebook Comments