ಬಡಜನರ ರಕ್ಷಣೆಗೆ 65,000 ಕೋಟಿ ರೂ. ಅಗತ್ಯವಿದೆ : ರಘುರಾಮ್ ರಾಜನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.30- ವ್ಯಾಪಕವಾಗುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಬಡವರಿಗೆ ನೆರವಾಗಲು 65 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ದೇಶದಲ್ಲಿ ತಲೆದೋರಿರುವ ಕೊರೊನಾ ಬಿಕ್ಕಟ್ಟು, ಲಾಕ್‍ಡೌನ್ ಮತ್ತು ಜನರ ದುಸ್ಥಿತಿ ಕುರಿತು ಮಾರ್ಗೋಪಾಯಗಳಿಗಾಗಿ ರಾಹುಲ್‍ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿರುವ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ವಿಡಿಯೋ ಸಂವಾದದ ಪ್ರಥಮ ಸಂಚಿಕೆಯಲ್ಲಿ ರಾಜನ್ ಮಾತನಾಡಿದರು.

ದೇಶದ ಜನರ ಬಡವರ ಹೊಟ್ಟೆ ತುಂಬಿಸಲು ಈಗ 65 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಸಂಕಷ್ಟದ ಸನ್ನಿವೇಶದಲ್ಲಿ ಲಾಕ್‍ಡೌನ್‍ಅನ್ನು ಅತ್ಯಂತ ಬುದ್ಧಿವಂತಿಕೆ ಮತ್ತು ದೂರಾಲೋಚನೆಯಿಂದ ತೆರವುಗೊಳಿಸಬೇಕಿದೆ ಎಂದು ಅವರು ಸಲಹೆ ಮಾಡಿದ್ದಾರೆ.

ಲಾಕ್‍ಡೌನ್ ತೆರವುಗೊಳಿಸುವ ಸಂದರ್ಭದಲ್ಲಿ ದೇಶದ ಜನರ ಅದರಲ್ಲೂ ಬಡವರ ಹಿತಾಸಕ್ತಿ, ಆರ್ಥಿಕ ಚೇತರಿಕೆ, ಸೋಂಕು ನಿಯಂತ್ರಣ ಮೊದಲಾದ ವಿಷಯಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು.

ಅತ್ಯಂತ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಿಂದ ಲಾಕ್‍ಡೌನ್ ತೆರವುಗೊಳಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಸವಾಲಿನ ಕಾರ್ಯವಾಗಿದೆ ಎಂದು ದೇಶದ ಖ್ಯಾತ ಆರ್ಥಿಕ ತಜ್ಞರೂ ಆದ ರಘುರಾಮ್ ರಾಜನ್ ಹೇಳಿದ್ದಾರೆ.

Facebook Comments

Sri Raghav

Admin