ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಅಬುದಾಬಿ, ಅ. 6- ಐಪಿಎಲ್ 12ರ ರನ್ನರ್ ಅಪ್ ತಂಡ ಮಹೇಂದ್ರಸಿಂಗ್ ಧೋನಿಯ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಸಿ ಹ್ಯಾಟ್ರಿಕ್ ಗೆಲುವಿನ ಹೊಸ್ತಿನಲ್ಲಿದ್ದ ಸ್ಟೀವ್ ಸ್ಮಿತ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡ ನಂತರ ಕೆಕೆಆರ್ ಹಾಗೂ ಆರ್‍ಸಿಬಿ ವಿರುದ್ಧ ಸೋಲು ಕಂಡಿದ್ದು ಈಗ ಹ್ಯಾಟ್ರಿಕ್ ಸೋಲನಿಂದ ತಪ್ಪಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಪರ ಹೋರಾಟ ನಡೆಸುತ್ತಿದೆ.

ಆರಂಭಿಕ ಪಂದ್ಯದಲ್ಲಿ ಸಿಎಸ್‍ಕೆ ನಂತರ ಆರ್‍ಸಿಬಿ ವಿರುದ್ಧ ಸೋಲು ಕಂಡಿದ್ದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ಅಭೂತ ಗೆಲುವು ಸಾಸಿದ್ದು ಆರ್‍ಆರ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಸಲು ಹೊರಟಿದೆ.

# ಬ್ಯಾಟಿಂಗ್ ವೈಫಲ್ಯ:
ರಾಜಸ್ತಾನ್ ರಾಯಲ್ಸ್ ನ ದಾಂಡಿಗರು ಆರಂಭಿಕ ಪಂದ್ಯಗಳಲ್ಲಿ ರನ್‍ಗಳ ಹೊಳೆ ಹರಿಸಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತಾದರೂ ನಂತರ ತಂಡದಲ್ಲಿರುವ ಸ್ಟಾರ್ ಬ್ಯಾಟ್ಸ್‍ಮನ್‍ಗಳಾದ ಜೋಸ್ ಬ್ಲಟರ್, ಸ್ಟೀವನ್ ಸ್ಮಿತ್ ರನ್ ಬರ ಅನುಭವಿಸುವ ಮೂಲಕ ತಂಡಕ್ಕೆ ಹಿನ್ನೆಡೆಯಾಯಿತಾದರೂ ಆರ್‍ಆರ್‍ನಲ್ಲಿರುವ ಯುವ ಆಟಗಾರರಾದ ಸಂಜುಸಮ್ಸನ್, ರಾಹುಲ್ ತೆವಾಟಿಯಾ ಅವರು ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರೆಸಿರುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

ಬೌಲ್ಟ್, ಮೆಕ್‍ಗ್ಲೆನ್, ಬೂಮ್ರಾರಂತಹ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಮುಂಬೈ ವಿರುದ್ಧ ದೊಡ್ಡ ಮಟ್ಟದ ರನ್ ಗಳಿಸಬೇಕಾದರೆ ತಂಡದಲ್ಲಿ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿರುವ ಜೋಸ್ ಬಟ್ಲರ್, ನಾಯಕ ಸ್ಟೀವನ್ ಸ್ಮಿತ್ , ರಾಬಿನ್ ಉತ್ತಪ್ಪ ಉತ್ತಮ ಪ್ರದರ್ಶನವನ್ನು ನೀಡಲೇಬೇಕು.

ರಾಜಸ್ಥಾನ್ ರಾಯಲ್ಸ್ ರೀತಿ ಮುಂಬೈ ಇಂಡಿಯನ್ಸ್ ಬಳಗದಲ್ಲೂ ರೋಹಿತ್ ಶರ್ಮಾ, ಡಿ ಕಾಕ್, ಇಷಾನ್ ಕಿಷನ್, ಕಿರಾನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯಾರಂತಹ ಸ್ಟಾರ್ ಬ್ಯಾಟ್ಸ್‍ಗಳ ದಂಡೇ ಇದೆಯಾದರೂ ಸ್ಥಿರ ಪ್ರದರ್ಶನ ನೀಡಲು ಇವರು ಎಡವುತ್ತಿರುವುದು ತಂಡದ ಬ್ಯಾಟಿಂಗ್ ಬಲ ಕುಸಿಯಲು ಕಾರಣವಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬೌಲರ್ ಜೋಫ್ರಾ ಅರ್ಚರ್ ಕರಾರುವಾಕ್ಕಾದ ಬೌಲಿಂಗ್ ದಾಳಿ ನಡೆಸಿದರೂ ತಂಡದಲ್ಲಿರುವ ದುಬಾರಿ ಮೊತ್ತದ ಬೌಲರ್ ಜಯದೇವ್ ಉನದ್ಕಟ್, ಟಾಪ್ ಕೊರಿನ್ ಅವರು ಎದುರಾಳಿಗಳಿಗೆ ಹೆಚ್ಚು ರನ್‍ಗಳನ್ನು ಬಿಟ್ಟು ಕೊಟ್ಟಿರುವುದು ಸ್ಮಿತ್‍ರ ತಲೆ ಬಿಸಿಯಾಗಿದೆ.

ಒಟ್ಟಾರೆ ಹ್ಯಾಟ್ರಿಕ್ ಜಯದತ್ತ ಚಿತ್ತ ಹರಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡಗಳ ವಿರುದ್ಧ ನಡೆಯುವ ಪಂದ್ಯವು ರೋಚಕತೆಯಿಂದ ಕೂಡಿರಲಿದೆ.

Facebook Comments

Sri Raghav

Admin