ಮಹತ್ವದ ಸಭೆ ಸಿಎಲ್‍ಪಿ, ರಾಜಸ್ತಾನ ರಾಜಕೀಯದಲ್ಲಿ ಮತ್ತಷ್ಟು ಕೂತೂಹಲ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ಜು.30-ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ವಿರುದ್ಧ 19 ಭಿನ್ನಮತೀಯ ಕಾಂಗ್ರೆಸ್ ಶಾಸಕರು ಬಂಡಾಯದ ಕಹಳೆ ಮೊಳಗಿಸಿರುವ ಪ್ರಕರಣ ಮತ್ತು ನಂತರದ ಬೆಳವಣಿಗೆ ಈಗ ಬಾರೀ ಚರ್ಚೆಗೆ ಗ್ರಾಸವಾಗಿದೆ.

ಆಡಳಿತಾರೂಡ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆಯಿಂದ ರಾಜಧಾನಿ ಜೈಪುರ್‍ನ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‍ಪಿ) ಮಹತ್ವದ ಸಭೆ ನಡೆಯುತ್ತಿದೆ.

ಬಹುಮತ ಸಾಬೀತು ಮಾಡಲು ಆಗಸ್ಟ್ 14ರಂದು ವಿಧಾನಸಭೆ ವಿಶೇಷ ಅಧಿವೇಶನ ನಡೆಸಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ಸಿಎಲ್‍ಪಿ ಸಭೆಗೆ ಭಾರೀ ಪ್ರಾಮುಖ್ಯತೆ ಲಭಿಸಿದೆ.

ಗೆಲ್ಹೋಟ್ ಬಣದ ಶಾಸಕರು ವಾಸ್ತವ್ಯ ಹೂಡಿರುವ ಜೈಪುರ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳ ಕುರಿತು ಗಹನ ಚರ್ಚೆ ನಡೆಯುತ್ತಿದೆ.

Facebook Comments

Sri Raghav

Admin