ರಾಜಭವನದಲ್ಲಿ ಮಾಧ್ಯಮಗಳಿಗೆ ಕಾಯ್ದಿರಿಸಿದ ಆಸನಗಳಲ್ಲಿ ಶಾಸಕರ ಸಂಬಂಧಿಗಳ ದರ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.6-ರಾಜಭವನದಲ್ಲಿ ಇಂದು ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿತ್ತು. ಮಾಧ್ಯಮಗಳಿಗೆ ಕಾಯ್ದಿರಿಸಿದ ಆಸನಗಳಲ್ಲಿ ಶಾಸಕರ ಸಂಬಂಧಿಕರು ಆಸೀನರಾಗಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಪ್ರಮಾಣ ವಚನ ಕಾರ್ಯಕ್ರಮದ ವರದಿ ಮಾಡಲು ಮತ್ತು ಛಾಯಾಚಿತ್ರ ತೆಗೆಯಲು ಮಾಧ್ಯಮದವರಿಗೆ ಅನುಕೂಲವಾಗುವಂತೆ ಆಹ್ವಾನ ಪತ್ರವನ್ನು ಅಧಿಕೃತವಾಗಿ ನೀಡಲಾಗಿತ್ತು.

ಆದರೆ ರಾಜಭವನ ಪ್ರವೇಶಿಸಲು ಮಾಧ್ಯಮದವರಿಗೆ ನಿರಾಕರಿಸಿದ್ದರಿಂದ ಮಾಧ್ಯಮದವರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ವಾಗ್ವಾದವೂ ನಡೆಯಿತು. ಎರಡುಮೂರು ಕಡೆ ಭದ್ರತಾ ಸಿಬ್ಬಂದಿ, ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಿದ್ದರು.

ಅಂತಿಮವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳ ಮಧ್ಯಪ್ರವೇಶದಿಂದ ಮಾಧ್ಯಮದವರು ರಾಜಭವನ ಪ್ರವೇಶ ಮಾಡಬೇಕಾಯಿತು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೂತನ ಸಚಿವರ ಸಂಬಂಧಿಕರು,ಹಿತೈಷಿಗಳು ಹಾಗೂ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿದ್ದರಿಂದ ಗೊಂದಲ ಉಂಟಾಗಿತ್ತು.

Facebook Comments