ನಾಳೆ ಸ್ನೇಹ ಶೃಂಗ ಕಾರ್ಯಕ್ರಮ, ಮಲೆನಾಡು ಮನಸ್ಸುಗಳ ಸಮಾಗಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.19- ಸ್ನೇಹಶೃಂಗ ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿನ ಮನಸ್ಸುಗಳ ಸಮಾಗಮ ಕಾರ್ಯಕ್ರಮವನ್ನು ನಾಳೆ ಮಧ್ಯಾಹ್ನ 3.30ಕ್ಕೆ ಆನಂದರಾವ್ ವೃತ್ತದ ಬಳಿ ಇರುವ ಕೆಇಬಿ ಸಭಾಭವನದಲ್ಲಿ ಹಮ್ಮಿಕೊಂಡಿದೆ. ಒಂದು ಮಲೆನಾಡ ಸೀಮೆಯಲ್ಲಿ… ಹಾಡು… ಹಾಸ್ಯ… ಮಾತು… ಎಂಬ ಸಾಂಸ್ಕøತಿಕ ಕಾರ್ಯಕ್ರಮ ದೊಂದಿಗೆ ಮಲೆನಾಡಿಗರು ಬೆರೆತು ನೆನಪಿನ ಸಂಬಂಧಗಳನ್ನು ಬೆಸೆಯುವ ಕಾರ್ಯಕ್ರಮ ಇದಾಗಿದೆ ಎಂದು ಸ್ನೇಹಶೃಂಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ ನೆರವೇರಿಸಲಿದ್ದಾರೆ. ಚಿಂತಕ, ಕವಿಗಳಾದ ಜಯಂತ್ ಕಾಯ್ಕಿಣಿ ಪ್ರಧಾನ ಉಪನ್ಯಾಸ ನೀಡಲಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಹುಮಾನ ವಿತರಣೆ ಮಾಡಲಿದ್ದಾರೆ. ಪ್ರಸಿದ್ಧ ಗಾಯಕಿ ನಾಡೋಜ ಡಾ.ಬಿ.ಕೆ.ಸುಮಿತ್ರಾ ಅವರಿಗೆ ಸ್ನೇಹಶೃಂಗ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ ಮಲೆನಾಡಿಗರ ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮ ಇದಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಗೂ ಮಲೆನಾಡಿನ ಅಸಂಖ್ಯಾತ ಜನರು ರಾಜಧಾನಿ ಬೆಂಗಳೂರಿನಲ್ಲಿ ನೆಲೆನಿಂತು ಉದ್ಯೋಗ, ವ್ಯವಹಾರಗಳ ಮುಖಾಂತರ ತಮ್ಮದೇ ಆದ ಛಾಪು ಮೂಡಿಸಿ ಹುಟ್ಟಿದ ಊರಿಗೆ ಗೌರವ ತಂದಿರುವುದು ಸಂತಸದ ವಿಷಯ. ಪ್ರತಿ ವರ್ಷವೂ ಬೆರೆತು ಮಾತನಾಡಲು ಸ್ನೇಹಶೃಂಗ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ನಾಳೆ 20ರಂದು ಹಮ್ಮಿಕೊಂಡಿರುವ ಈ ಸ್ನೇಹಕೂಟ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ ಮನವಿ ಮಾಡಿದ್ದಾರೆ.

Facebook Comments