ಎಲೆಕ್ಟ್ರಾನಿಕ್ ಉತ್ಪಾದನಾ ಹಬ್ ಆಗುವತ್ತ ಭಾರತ ದಾಪುಗಾಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23- ಭಾರತ ಎಲೆಕ್ಟ್ರಾನಿಕ್ ಉತ್ಪಾದನಾ ಹಬ್ ಆಗಲು ಮತ್ತು ಜಾಗತಿಕ ಮೌಲ್ಯಯುತವಾದ ಜಾಲದ ವಿಶ್ವಾಸಾರ್ಹವಾದ ದೇಶವಾಗಲು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದು, ಇದಕ್ಕಾಗಿ ಅಗತ್ಯವಿರುವ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಕಾರ್ಯನಿರತವಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತ್ವ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಪುನರ್‍ಕಲ್ಪನೆ, ರೀಬೂಟ್, ಸುಧಾರಣೆ ಎಂಬ ಕುರಿತಾದ ವಿಷಯದ ಮೇಲೆ ಪಬ್ಲಿಕ್ ಅಫೇರ್ಸ್ ಫೆÇೀರಂ ಆಫ್ ಇಂಡಿಯಾ(ಪಿಎಎಫ್‍ಐ) ಏರ್ಪಡಿಸಿದ್ದ 8 ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿಡಿಯೋ ಕಾನರೆನ್ಸ್ ಮೂಲಕ ಮಾತನಾಡಿದ ಅವರು, 2014-15 ರಲ್ಲಿ ನಮ್ಮ ದೇಶದಲ್ಲಿ 1.8 ಲಕ್ಷ ಕೋಟಿ ಮËಲ್ಯದ ಎಲೆಕ್ಟ್ರಾನಿಕ್ ಉತ್ಪಾದನೆ ಇತ್ತು.

ನಂತರದ ಐದು ವರ್ಷಗಳಲ್ಲಿ ಇದರ ಪ್ರಮಾಣ 5.5 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತು. ನಾವು ನಿಖರವಾದ ನೀತಿಗಳನ್ನು ರೂಪಿಸಿರುವುದು ಮತ್ತು ಗುರಿಯನ್ನು ಇಟ್ಟುಕೊಂಡು ನೀತಿಗಳನ್ನು ರೂಪಿಸುವ ಮೂಲಕ ಬೆಳವಣಿಗೆಯನ್ನು ಕಂಡಿದ್ದೇವೆ. ಇದು ನಮ್ಮ ಯಶಸ್ಸು ಎಂದೇ ಹೇಳಬಹುದು.

ಇದೇ ವೇಳೆ ವಿಶ್ವಾಸಾರ್ಹವಾದ ಮೌಲ್ಯಯುತ ಜಾಲದಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸುವುದು ನಮ್ಮ ಉದ್ದೇಶವಾಗಿದೆ. 2024-25 ರ ವೇಳೆಗೆ ಭಾರತ 250-300 ಯುಎಸ್‍ಡಿ ಬಿಲಿಯನ್ ಮೊತ್ತದ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೊಂದುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಜಾಗತಿಕ ಮಾರುಕಟ್ಟೆಗೆ ಅತ್ಯಂತ ವಿಶ್ವಾಸಾರ್ಹವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಮುಖ ಪೂರೈಕೆದಾರ ದೇಶವಾಗಲಿದೆ. ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಮತ್ತು ನಮಗೆ ಉತ್ತಮ ಅವಕಾಶ ಲಭ್ಯವಾಗಲಿದೆ. ಡಿಜಿಟಲ್ ಆರ್ಥಿಕತೆ ಮತ್ತು ಇದಕ್ಕೆ ಸಂಬಂಸಿದ ಕ್ಷೇತ್ರಗಳಿಗೆ ಇದು ವೈ2ಕೆ ಕ್ಷಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಕ್ವಿಪ್‍ಮೆಂಟ್ ಮತ್ತು ಸಿಸ್ಟಂನಲ್ಲಿ ವಿಸ್ತರಣೆ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇದಲ್ಲದೇ, ಆಟೋಮೋಟಿವ್ ಮತ್ತು ಮೆಡಿಕಲ್ ಇಕ್ವಿಪ್‍ಮೆಂಟ್‍ನತ್ತಲೂ ಗಮನಹರಿಸುತ್ತಿದ್ದೇವೆ. ಭಾರತವನ್ನು ಎಲೆಕ್ಟ್ರಾನಿಕ್ ಶಕ್ತಿಯನ್ನಾಗಿ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.

ನಾವು ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದಕ ದೇಶವಾಗುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದೇವೆ. ಇದು ಇತರೆ ದೇಶಗಳಿಗಿಂತ ಭಿನ್ನವಾಗಿರುತ್ತದೆ. ಇದು ಕೇವಲ ಪ್ರಚಾರಕ್ಕಾಗಿ ರೂಪಿಸಿರುವ ಉಪಕ್ರಮವಲ್ಲ. ಇದು ಸೆಮಿಕಂಡಕ್ಟರ್ ಮತ್ತು ಬಿಡಿಭಾಗಗಳ ಕ್ಷೇತ್ರದಲ್ಲಿ ಆಳವಾದ, ಸುಸ್ಥಿರವಾದ ಮತ್ತು ಸ್ಪರ್ಧಾತ್ಮಕತೆಯನ್ನು ಪಡೆಯಲಿದೆ ಎಂದರು.

ಅಮೆಜಾನ್ ಇಂಡಿಯಾದ ಚೇತನ್ ಕೃಷ್ಣಸ್ವಾಮಿ, ಪಬ್ಲಿಕ್ ಪಾಲಿಸಿ ಫಿಲಾಂಥ್ರಪಿ ಶುಗುಫ್ತಾ ಕಮ್ರಾನ್, ಪಿಎಎಫ್‍ಐನ ಉಪಾಧ್ಯಕ್ಷ ವಿರಾಟ್ ಭಾಟಿಯಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

Sri Raghav

Admin