ಶಾರದಾ ಚಿಟ್ ಫಂಡ್ ಹಗರಣ : ವಿದೇಶಕ್ಕೆ ಎಸ್ಕೇಪ್ ಆಗಲು ರಾಜೀವ್ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 26- ಬಹುಕೋಟಿ ರೂ.ಗಳ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ಕೋಲ್ಕತಾ ಪೊಲೀಸ್ ಮಾಜಿ ಆಯುಕ್ತ ರಾಜೀವ್ ಕುಮಾರ್ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಅವರು ದೇಶದಿಂದ ಹಾರವುದನ್ನು ತಡೆಗಟ್ಟಲು ಕೇಂದ್ರಿಯ ತನಿಖಾದಳ-ಸಿಬಿಐ ಎಲ್ಲ ಏರ್‍ಪೆಫೋರ್ಟ್‍ಗಳಿಗೂ ಲುಕ್‍ಔಟ್ ನೋಟಿಸ್ ನೀಡಿದೆ.

ಈ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರಿಗೆ ಬಂಧನ ರಕ್ಷಣೆ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಬಂಧನಕ್ಕೊಳಗಾಗುವ ಭೀತಿಯಿಂದಾಗಿ ರಾಜೀವ್ ಅವರು ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಾರೆ ಎಂಬ ಮಾಹಿತಿ ಸಿಬಿಐಗೆ ಲಭಿಸಿದೆ.

ಅವರು ವಿದೇಶಕ್ಕೆ ಪಲಾಯನವಾಗುವುದನ್ನು ತಪ್ಪಿಸಲು ದೇಶದ ಎಲ್ಲಾ ಪ್ರಮುಖ ಏರ್ ಫೋರ್ಟ್‍ಗಳಿಗೂ ಸಿಬಿಐ ಲುಕ್‍ಔಟ್ ನೋಟಿಸ್ ಜಾರಿಗೊಳಿಸಿ ಅವರು ದೇಶದಿಂದ ಹೊರಹೋಗದಂತೆ ಬಂದೋಬಸ್ತ್ ಮಾಡಿದೆ.

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಾಕ್ಷ್ಯಾಧಾರ ಮತ್ತು ದಾಖಲೆ ಪತ್ರಗಳನ್ನು ತಿರುಚಿದ ಆರೋಪಕ್ಕೆ ಗುರಿಯಾಗಿರುವ ರಾಜೀವ್ ಕುಮಾರ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಬಂಧನ ರಕ್ಷಣೆ ಗಡುವು ವಿಸ್ತರಿಸಲು ನಿರಾಕರಿಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ