ಬಂಧನ ಭೀತಿಯಿಂದ ಸುಪ್ರೀಂಕೋರ್ಟ್ ಮೊರೆಹೋದ ರಾಜೀವ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 20-ಬಹುಕೋಟಿ ರೂ.ಗಳ ಶಾರದಾ ಚಿಟ್ ಫಂಡ್ ಹಗರಣದ ಸಂಬಂಧ ಬಂಧನ ಬೀತಿಯಲ್ಲಿರುವ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತಮಗೆ ನೀಡಿಲಾಗಿರುವ ಏಳು ದಿನಗಳ ರಕ್ಷಣೆ ಅವಧಿಯನ್ನು ವಿಸ್ತರಿಸುವಂತೆ ಇಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಈ ಹಗರಣದಲ್ಲಿ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪಗಳಿಗೆ ಗುರಿಯಾಗಿರುವ ರಾಜೀವ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ಮೇ 17ರಂದು ಏಳು ದಿನಗಳ ರಕ್ಷಣೆಯನ್ನು ಮಂಜೂರು ಮಾಡಿತ್ತು. ಮುಂದಿನ ಕಾನೂನು ಪರಿಹಾರೋಪಾಯಕ್ಕಾಗಿ ಸಕ್ಷಮ ನ್ಯಾಯಾಲಯಕ್ಕೆ ಮೊರೆ ಹೋಗುವಂತೆ ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ಈ ಹಿನ್ನೆಲೆಯಲ್ಲಿ ರಾಜೀವ್ ಕುಮಾರ್ ಪರ ವಕೀಲರು ಇಂದು ರಕ್ಷಣಾ ಅವಧಿ ವಿಸ್ತರಣೆ ಕೋರಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ರಜೆ ಕಾಲದ ಪೀಠಕ್ಕೆ ಮನವಿ ಸಲ್ಲಿಸಿ ಈ ಅರ್ಜಿ ಬಗ್ಗೆ ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದಾರೆ.

ಕೋಲ್ಕತಾ ನ್ಯಾಯಾಲಯಗಳ ವಕೀಲರು ಮುಷ್ಕರದಲ್ಲಿ ಇರುವ ಕಾರಣ ಈ ಪ್ರಕರಣದಲ್ಲಿ ಕಾನೂನು ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಂಧನದಿಂದ ರಕ್ಷಣೆ ನೀಡುವ ಅವಧಿಯನ್ನು ವಿಸ್ತರಿಸುವಂತೆ ವಕೀಲರು ಮನವಿ ಮಾಡಿದ್ಧಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ