ರಾಜೇಶ್ ಗೌಡ ನಾಮಪತ್ರ ಸಲ್ಲಿಕೆ, ಶಿರಾದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.16- ಶಿರಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆಯ ಕಡೆ ದಿನವಾದ ಇಂದು ಅಕೃತವಾಗಿ ಬಿ ಫಾರಂನೊಂದಿಗೆ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ನಾಮಪತ್ರ ಸಲ್ಲಿಸಿದರು. ಈಗಾಗಲೇ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿಬಿ ಜಯಚಂದ್ರ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ.

ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶ್ ಗೌಡ ಅವರು ಪ್ರಾಯೋಗಿಕವಾಗಿ ನಾಮಪತ್ರಸಲ್ಲಿಸಿದ್ದು, ಇಂದು ಅಂತಿಮವಾಗಿ ಪಕ್ಷದ ಬಿ ಫಾರಂನೊಂದಿಗೆ ಬಿಜೆಪಿ ಪಕ್ಷದ ಘಟಾನುಘಟಿಗಳ ಸಹಯೋಗ ದೊಂದಿಗೆ ಶಿರಾ ನಗರದಿಂದ ಹೊರ ಭಾಗದಲ್ಲಿರುವ ಮಿನಿ ವಿಧಾನಸೌಧದ ವರೆಗೆ ಬೃಹತ್ ಮೆರವಣಿಗೆಯಲ್ಲಿ.

ಉಪಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ, ಸಂಸದ ಜಿ.ಎಸ್.ಬಸವರಾಜು, ಚಿತ್ರದುರ್ಗದ ಸಂಸದ ವೈ.ಎ. ನಾರಾಯಣ್ ಸ್ವಾಮಿ, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್ ಗೌಡ, ಶಾಸಕರಾದ ಜ್ಯೋತಿ ಗಣೇಶ್. ಮಸಾಲೆ ಜಯರಾಮï.

ತಿಪಟೂರು ನಾಗೇಶ್ ಹಾಗೂ ಶಿರಾ ನಗರದ ಬಿಜೆಪಿ ಪಕ್ಷದ ಮುಖಂಡರಾದ ಬಿ.ಕೆ.ಮಂಜುನಾಥ್ ಎಸ್.ಆರ್.ಗೌಡ ಸೇರಿದಂತೆ ಇತರರು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ರಾಜೇಶ್ ಗೌಡ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಾಮಪತ್ರ ಸಲ್ಲಿಸುವ ವೇಳೆ ಸಾಗರದಂತೆ ಹರಿದು ಬಂದಿದ್ದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಶಕ್ತಿ ಪ್ರದರ್ಶನ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರು ಆಗಿರುವ ವಿಜಯೇಂದ್ರ ಅವರು ರಾತ್ರಿಯೇ ತುಮಕೂರು ತಾಲೂಕಿನ ಬೆಳ್ಳಾವಿ ಕ್ರಾಸ್ ಬಳಿಯ ಗೆಸ್ಟ್‍ಹೌಸ್ ಒಂದರಲ್ಲಿ ತಂಗಿದ್ದರು.

ಇಂದು ಬೆಳಗ್ಗೆ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶ್ ಗೌಡ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಚುನಾವಣೆಗೆ ನಡೆಸಬೇಕಾದ ಕಾರ್ಯತಂತ್ರಗಳ ಬಗ್ಗೆ ರೂಪುರೇಖೆಗಳನ್ನು ಸಿದ್ಧಪಡಿಸಲು ರಾತ್ರಿಯೇ ತುಮಕೂರಿನ ಹೊರಭಾಗದಲ್ಲಿರುವ ಬೆಳ್ಳಾವಿ ಕ್ರಾಸ್ ಬಳಿ ಇರುವ ಗೆಸ್ಟï ಹೌಸ್ ನಲ್ಲಿ ಶಿರಾ ತಾಲ್ಲೂಕು ಹಾಗೂ ತುಮಕೂರು ಜಿಲ್ಲಾ ಅಧ್ಯಕ್ಷರು, ಪದಾಕಾರಿಗಳು, ಶಾಸಕರು, ಮಾಜಿ ಶಾಸಕರು ಸಭೆ ನಡೆಸಿ ಯಾರಿಗೆ ಯಾವ ಯಾವ ಜವಾಬ್ದಾರಿ ವಹಿಸಬೇಕು ಎಂಬ ವಿಚಾರ ಮುಂದಿನ ನಡೆಯಾಗಿದೆ.

ಕಾರ್ಯಕ್ರಮ ಯಾವ ರೀತಿ ಆಗಬೇಕು, ಚುನಾವಣೆ ಗೆದ್ದೇ ಗೆಲ್ಲಬೇಕು ಇಲ್ಲದಿ ದ್ದರೆ ರಾಜ್ಯ ಸರ್ಕಾರಕ್ಕೆ ಭಾರಿ ಮುಖಭಂಗ ವಾಗಲಿದೆ ಎಂಬ ಹಿನ್ನೆಲೆಯಲ್ಲಿ ಬಿ.ವೈ. ವಿಜೆಯೇಂದ್ರ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಅದರೆ ಬಿಜೆಪಿ ಪಕ್ಷದ ಆಂತರಿಕ ಕಲಹ ಅದು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದು ಜಿಲ್ಲಾ ಬಿಜೆಪಿ ಪಕ್ಷದ ನಾಯಕರು ಹಾಗೂ ಕಾರ್ಯ ಕರ್ತರಲ್ಲಿ ಆತಂಕ ಮನೆಮಾಡಿದೆ.

Facebook Comments

Sri Raghav

Admin