ಸೂಪರ್ ಸ್ಟಾರ್ ರಜಿನಿಕಾಂತ್ ಮನೆಯಲ್ಲಿ ಬಾಂಬ್..!

ಈ ಸುದ್ದಿಯನ್ನು ಶೇರ್ ಮಾಡಿ

ಚಿನ್ನೈ, ಜೂ. 19- ಸೂಪರ್‍ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಬಂದ ಕರೆಯಿಂದ ಕೆಲಹೊತ್ತು ಆತಂಕದ ವಾತಾವರಣದ ಉಂಟಾಗಿತ್ತು.

ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿದ್ದೇವೆಂದು ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ರಜನಿಯ ಮನೆಯ ಮೂಲೆ ಮೂಲೆಯನ್ನು ಶೋಧಿಸಿದ ಪೊಲೀಸರು ಅದೊಂದು ಹುಸಿ ಕರೆಯಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಮದ್ಯದಂಗಡಿಗಳನ್ನು ತೆರೆಯಬಾರದು ಎಂದು ಸೂಪರ್‍ ಸ್ಟಾರ್ ರಜನಿಕಾಂತ್ ಆಡಳಿತ ಪಕ್ಷಕ್ಕೆ ಸಲಹೆ ನೀಡಿದ್ದರಿಂದ ಈ ಬೆದರಿಕೆ ಕರೆಯನ್ನು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಜನಿ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದವರ ಪತ್ತೆಗಾಗಿ ಬಲೆ ಬೀಸಿದ್ದು ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೂಪರ್‍ಸ್ಟಾರ್ ಮನೆಯನ್ನು ಸ್ಫೋಟಿಸುವುದಾಗಿ ಕರೆ ಬಂದ ಸುದ್ದಿಯ ವಿರುದ್ಧ ರಜನಿ ಅಭಿಮಾನಿಗಳು ಅಂತರ್ಜಾಲಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Facebook Comments