ರಾಜೀವ್ ಹತ್ಯೆ ಪ್ರಕರಣದ ಅಪರಾಧಿ ಪೆರರಿವಳನ್‍ಗೆ ಪೆರೋಲ್ ಮೇಲೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲೂರು,ನ.12- ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ವೆಲ್ಲೂರಿನ ಕೇಂದ್ರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪೆರರಿವಳನ್‍ನನ್ನು ಇಂದು ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಆತನನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಇದು ಎರಡನೇ ಬಾರಿಗೆ ಪೆರರಿವಳನ್ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದಾನೆ. 2017ರಲ್ಲಿ ಪೆರರಿವಳನ್‍ನನ್ನು 30 ದಿನಗಳವರೆಗೆ ಬಿಡುಗಡೆ ಮಾಡಲಾಗಿತ್ತು.

ಆತನ ತಾಯಿ ಅರ್ಪುಧಮ್ಮಾಳ್‍ರವರ ಕೋರಿಕೆಯ ಮೇರೆಗೆ ಇನ್ನೂ 30 ದಿನಗಳವರೆಗೆ ಪೆರೋಲ್‍ ವಿಸ್ತರಿಸಲಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿ ಪೆರರಿವಳನ್ ಸೇರಿದಂತೆ ಇತರ ಆರು ಮಂದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮೇ 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‍ಟಿಟಿಇ) ಆತ್ಮಾಹುತಿ ಬಾಂಬರ್ ಹತ್ಯೆಗೈದ್ದಿದ್ದರು. ಈ ದಾಳಿಯಲ್ಲಿ ಇತರ 14 ಜನರು ಸಾವನ್ನಪ್ಪಿದ್ದರು.

Facebook Comments