ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆಗೆ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಅ.18- ಮಾಜಿಪ್ರಧಾನಿ ಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿರುವ ಏಳು ಅಪರಾಧಿಗಳನ್ನು ಬಂಧ ಮುಕ್ತಗೊಳಿಸಲು ತಮಿಳುನಾಡು ರಾಜ್ಯಪಾಲ ಬನ್ವರೀಲಾಲ್ ಪುರೋಹಿತ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಕುರಿತು ಅವರು ತಮಿಳುನಾಡು ಮುಖ್ಯಮಂತ್ರಿ ಇ.ಪಳನೀಸ್ವಾಮಿ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿರುವ ನಳಿನಿ, ಶ್ರೀಹರನ್, ಸುತೇಂದ್ರರಾಜಾ, ಜಯಕುಮಾರ್, ರಾಬರ್ಟ್ ಪೈಯಾಸ್, ಪಿರಾರಿವಳನ್ ಮತ್ತು ರವಿಚಂದ್ರನ್ ಅವರನ್ನು ಬಿಡುಗಡೆಗೊಳಿಸಲು ರಾಜ್ಯಸಂಪುಟ ಸಭೆ ಕೈಗೊಂಡಿರುವ ನಿರ್ಧಾರದ ಬಗ್ಗೆ ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಅಧಿಕೃತ ಆದೇಶ ಹೊರಡಿಸಿಲ್ಲವಾದರು ತಮ್ಮ ನಿಲುವನ್ನು ಮುಖ್ಯಮಂತ್ರಿ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ